ಮಂಗಳೂರು:ದೇಶದ ಅಂತರ್ಜಾಲ ವಿತರಣಾ ಕ್ಷೇತ್ರದಲ್ಲಿ ಆರನೇ ಅತಿ ದೊಡ್ಡ ಸೇವಾ ಪೂರೈಕೆದಾರರಲ್ಲೊಂದಾದ ಕೇರಳ ವಿಷನ್ ಬ್ರಾಡ್ಬ್ಯಾಂಡ್ ಇದೀಗ ಮಂಗಳೂರಿನಲ್ಲಿ ತನ್ನ ಸೇವೆಯನ್ನು “ಕೆಸಿಸಿಎಲ್ ಕುಡ್ಲಾ” ಎಂಬ ಹೆಸರಿನಲ್ಲಿ ವಿಸ್ತರಿಸಲು ಹೊರಟಿದ್ದು ನಗರದ ಬೆಂದೂರ್ವೆಲ್ ನಲ್ಲಿರುವ ಕಚೇರಿಯಲ್ಲಿ ಇದರ ಅಧಿಕೃತ ಉದ್ಘಾಟನೆಯನ್ನು ನಾಳೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ನೆರವೇರಿಸಲಿದ್ದಾರೆ ಎಂದು ಕೆಸಿಸಿಎಲ್ ಕುಡ್ಲಾ ಇದರ ಅಧ್ಯಕ್ಷರಾದ ಶುಕ್ಕೂರ್ ಕೋಳಿಕ್ಕರ ತಿಳಿಸಿದರು .
ಅವರು ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆಸಿಸಿಎಲ್ ಕುಡ್ಲಾ ಡಾಟಾ ಕೇಂದ್ರವನ್ನು ಕೇರಳ ವಿಷನ್ ಆಪರೇಟರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಪ್ರವೀಣ್ ಮೋಹನ್ ಉದ್ಘಾಟಿಸಲಿದ್ದಾರೆ. ಮಂಗಳೂರಿಗೆ ವಿಶೇಷವಾಗಿ ರೂಪಿಸಿದ ಬ್ರಾಡ್ಬ್ಯಾಂಡ್ ಯೋಜನೆಗಳ ದರಪಟ್ಟಿಯನ್ನು ಕೆಸಿಸಿಎಲ್ ಅಧ್ಯಕ್ಷ ಕೆ. ಗೋವಿಂದನ್ ಬಿಡುಗಡೆಗೊಳಿಸಲಿದ್ದಾರೆ ಎಂದರು .
ಕಾರ್ಯಕ್ರಮದಲ್ಲಿ ಕೇರಳ ವಿಷನ್ ಆಪರೇಟರ್ಸ್ ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಬಿ. ಸುರೇಶ್, ಕೋಶಾಧಿಕಾರಿ ಬಿನು ಶಿವದಾಸ್, ಕಾರ್ಯಕಾರಿ ಸಮಿತಿ ಸದಸ್ಯ ಕೆ. ವಿಜಯಕೃಷ್ಣನ್ ಹಾಗೂ ಕೆಸಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಕುಮಾರ್ ಪಿ.ಪಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು .ಅತಿ ವೇಗ, ಸ್ಥಿರತೆ ಮತ್ತು ಕಡಿಮೆ ದರಗಳೊಂದಿಗೆ ಮಂಗಳೂರಿನ ಗ್ರಾಹಕರಿಗೆ ಉತ್ತಮ ಬ್ರಾಡ್ಬ್ಯಾಂಡ್ ಸೇವೆಯನ್ನು ಒದಗಿಸಲು ಕೇರಳ ವಿಷನ್ ಸಜ್ಜಾಗಿದೆ. ಬಫರಿಂಗ್ ಇಲ್ಲದೆ, ಅಡ್ಡಿಯಿಲ್ಲದ ಸ್ಟ್ರೀಮಿಂಗ್, 24 ಗಂಟೆಗಳ ವಿಶ್ವಾಸಾರ್ಹ ಸಂಪರ್ಕ ಮತ್ತು ಹವಾಮಾನ ಬದಲಾವಣೆಗೂ ತಡೆಯಾದ ಸ್ಥಿರ ಸೇವೆ ಒದಗಿಸುವುದಾಗಿ ಅವರು ಭರವಸೆ ನೀಡಿದರು .
ಸಮಿತಿಯ ಪ್ರಮುಖರಾದ ಸುದೇಶ್ ಭಂಡಾರಿ ಇರಾ ಮಾತನಾಡಿ , ಮಂಗಳೂರಿನ ಐಟಿ, ಶಿಕ್ಷಣ, ಸ್ಟಾರ್ಟ್ಅಪ್ ಹಾಗೂ ವ್ಯಾಪಾರ ಕ್ಷೇತ್ರಗಳಿಗೆ ಬಲಿಷ್ಠ ಡಿಜಿಟಲ್ ಮೂಲಸೌಕರ್ಯ ಒದಗಿಸುವುದು ಕೆಸಿಸಿಎಲ್ ಕುಡ್ಲಾ ಯ ಮುಖ್ಯ ಉದ್ದೇಶವಾಗಿದೆ . ಕಾಸರಗೋಡು ಜಿಲ್ಲೆಯ ಅಧಿಕೃತ ವಿತರಕ ಸಂಸ್ಥೆಯಾದಕಾಲೀಗ್ಸ್ ಕೇಬಲ್ ನೆಟ್ ಪ್ರೈ. ಲಿ. ಇದೀಗ ಮಂಗಳೂರು ನಗರದಲ್ಲೂ ಕೇರಳ ವಿಷನ್ ಬ್ರಾಡ್ಬ್ಯಾಂಡ್ ಸೇವೆಗಳನ್ನು ನೇರವಾಗಿ ವಿತರಿಸುತ್ತಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಮುಖ್ಯಸ್ಥರಾದ ಮೋಹನ್ ಟಿವಿ , ಲೋಹಿದಾಸನ್ , ಮನೋಜ್ ಕುಮಾರ್ , ಹರೀಶ್ ಕುಮಾರ್ ಸಹಿತ ಮುಂತಾದವರು ಉಪಸ್ಥಿತರಿದ್ದರು