ಅಂತರ್ ರಾಜ್ಯ ಮಾದಕ ವಸ್ತು ಮಾರಾಟಗಾರರ ಬಂಧನ.ಒಟ್ಟು 38 ಲಕ್ಷದ 42,000/-ಮೌಲ್ಯದ ಮಾದಕ ವಸ್ತು, ವಾಹನ, ಮಾರಕಾಸ್ತ್ರ ಹಾಗೂ ಸೊತ್ತುಗಳ ವಶ.

ದ.ಕ ಜಿಲ್ಲಾ ಪೊಲೀಸ್‍ ಆಧೀಕ್ಷಕರ ವಿಶೇಷ ತಂಡದಿಂದ ಮಾದಕ ವಸ್ತು ಮಾರಾಟಗಾರರ ಜಾಲದ ಪ್ರಮುಖ ಆರೋಪಿಗಳಾದ 1) ಮುಹಮ್ಮದ್‌ ಅಜ್ಮಲ್‌ ಸಿ @ ಅಜ್ಜು ಪ್ರಾಯ: 30 ವರ್ಷ ತಂದೆ: ದಿ| ಅಶ್ರಪ್‌ ವಾಸ: ಚೆನ್ನಿಲೊಟ್ಟು, ವೇಲಂ, ವಡಕರ್‌ ತಾಲೂಕು, ಕೋಝಿಕೋಡ್, ಕೇರಳ 2) ಇಸ್ಮಾಯಿಲ್‌ ಪ್ರಾಯ: 28 ವರ್ಷ ತಂದೆ: ಇಬ್ರಾಹಿಂ ವಾಸ: ಮುಂಡಿಕುಂಞಲ್‌, ಚರುಕಾಟುರ್‌ ಗ್ರಾಮ ಮಾನಂದವಾಡಿ, ವಯನಾಡ್‌ ಜಿಲ್ಲೆ ಕೇರಳ 3) ಸಂಶೀರ್‌ ಪ್ರಾಯ: 27 ವರ್ಷ ತಂದೆ: ಬಶೀರ್‌ ವಾಸ: ಕಹ್ನೀರಾ, ಪಾಲೇರಿ ಗ್ರಾಮ, ಕೊಝಿಕೋಡ್‌ ಜಿಲ್ಲೆ ಕೇರಳ ಇವರುಗಳನ್ನು ಬಂಧಿಸಿ ಮಾದಕ ವಸ್ತು ವಾದ ರೂ 5,38,800/- ಮೌಲ್ಯದ 53.58 ಗ್ರಾಂ MDMA ಹಾಗೂ ರೂ 18,00,00/- ಮೌಲ್ಯದ ಮಹೀಂದ್ರ ಕಂಪನಿಯ ಥಾರ್‍ ವಾಹನ ಮತ್ತು ಮಾರಕಾಸ್ತ್ರ ಹಾಗೂ ರೂ. 1 ಲಕ್ಷದ 52,000 ಮೌಲ್ಯದ ಮೊಬೈಲ್‍ಗಳು ಹಾಗೂ ನಗದು ರೂ. 10,000/- ವಶಪಡಿಸಿಕೊಂಡು ಪುತ್ತೂರು ಗ್ರಾಮಾಂತರ ಠಾಣಾ ಅ.ಕ್ರ 25/2026 ಕಲಂ 8C, 22(C), 29 NDPS Act 1985 & ಕಲಂ: 25(1B)(B) Arms Act ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಈ ಪ್ರಕರಣದ ಪ್ರಮುಖ ಆರೋಪಿ ಮುಹಮ್ಮದ್‌ ಅಜ್ಮಲ್‌ ಸಿ @ ಅಜ್ಜು ಈತನು ಕೇರಳ , ಗೋವಾ, ಹಾಗೂ ಕರ್ನಾಟಕ ರಾಜ್ಯಗಳಿಗೆ ಮಾದಕ ವಸ್ತುವನ್ನು ಸರಬರಾಜು ಮಾಡುತ್ತಿದ್ದು, ಕೇರಳ ರಾಜ್ಯದ ಕೋಝಿಕೋಡು, ಕಣ್ಣೂರು, ವಯನಾಡ್‍ ಜಿಲ್ಲೆಗಳಲ್ಲಿ ಪ್ರಕರಣ ದಾಖಲಾಗಿ, ತಲೆ ಮರೆಸಿಕೊಂಡಿರುತ್ತಾನೆ. ಅಲ್ಲದೆ ಈತನು ಇತ್ತೀಚೆಗೆ ಪುತ್ತೂರು ಗ್ರಾಮಾಂತರ ಠಾಣಾ ಅ.ಕ್ರ: 04/2026 ಪ್ರಕರಣದಲ್ಲಿ 1) ಮಹಮ್ಮದ್‌ ಶಾಬಾದ್‌, ಪಲ್ಲಂಗೋಡು, ಅಡೂರು, ಕಾಸರಗೋಡು 2)ಅಬ್ದುಲ್‌ ನಾಸೀರ್‌.ಎ.ಪಿ, ಪುದಿಯಾಪುರ, ನೆಟ್ಟಣಿಗೆ ಮುಡ್ನೂರು, ಪುತ್ತೂರು 3) ವಿಧು ಕೃಷ್ಣನ್‍ ತಲಿಪರಂಭ ಕಣ್ಣೂರು ಕೇರಳ ಎಂಬವರನ್ನು ಬಂಧಿಸಿ, ಆರೋಪಿಗಳಿಂದ ರೂ 1,64,000/-ಮೌಲ್ಯದ 16.26 ಗ್ರಾಂ MDMA ಹಾಗೂ ರೂ 11,00,000/- ಮೌ್ಲ್ಯದ 2 ಕಾರು ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾದ ಪ್ರಕರಣದ ಪ್ರಮುಖ ಆರೋಪಿಯಾಗಿರುತ್ತಾನೆ. ಅಜ್ಮಲ್‍ ಸಹಚರನಾದ ಇಸ್ಮಾಯಿಲ್‌ನ ಮೇಲೆ ಕೂಡ ಕೇರಳ ರಾಜ್ಯದ ಕೋಝಿಕೋಡು ಜಿಲ್ಲೆಯಲ್ಲಿ ಮಾದಕ ವಸ್ತು ಸಾಗಾಟದ ಪ್ರಕರಣ ದಾಖಲಾಗಿರುತ್ತದೆ.

ಸದ್ರಿ ಎರಡು ಪ್ರಕರಣಗಳಲ್ಲಿ ಆರೋಪಿಗಳಿಂದ ಒಟ್ಟು ಅಂದಾಜು ಮೌಲ್ಯ 6 ಲಕ್ಷದ 98,000/- ರೂಪಾಯಿಯ 69.84 ಗ್ರಾಂ MDMA ಹಾಗೂ ಪ್ರಕರಣಕ್ಕೆ ಉಪಯೋಗಿಸಿದ ರೂ. 29 ಲಕ್ಷದ 3 ವಾಹನದ ಮೌಲ್ಯ ಹಾಗೂ 2 ಲಕ್ಷ ಮೌಲ್ಯದ ಮೊಬೈಲ್‍ ಗಳು ಹಾಗೂ ನಗದು ರೂ.44,000/- ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ ರೂ. 38 ಲಕ್ಷದ 42,000/- ಆಗಿರುತ್ತವೆ.

ಇತ್ತೀಚೆಗೆ ದ.ಕ ಜಿಲ್ಲಾ ಪೊಲೀಸ್‍ ಆಧೀಕ್ಷಕರ ನೇತೃತ್ವದ ತಂಡ ಜಿಲ್ಲೆಯಾದ್ಯಂತ ಮಾದಕ ವಸ್ತು ಮಾರಾಟ ಹಾಗೂ ಸೇವನೆ ಮಾಡುವವರ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು ಈ ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಶ್ರೀ ಪ್ರಮೋದ್‍ ಕುಮಾರ್‍ ಪೊಲೀಸ್ ಉಪಾಧೀಕ್ಷಕರು ಪುತ್ತೂರು ಉಪ ವಿಭಾಗ, ಸುನಿಲ್‍ ಕುಮಾರ್, ಪೊಲೀಸ್‍್ ನಿರೀಕ್ಷಕರು ಪುತ್ತೂರು ಗ್ರಾಮಾಂತರ, ನಂದ ಕುಮಾರ್‍, ಪೊಲೀಸ್‍್ ನಿರೀಕ್ಷಕರು, ಡಿ.ಎಸ್‍.ಬಿ ದ.ಕ ಜಿಲ್ಲೆ, ಗುಣಪಾಲ ಜೆ (ಕಾ&ಸು) ಪೊಲೀಸ್‍ ಉಪನಿರೀಕ್ಷಕರು, ಪುತ್ತೂರು ಗ್ರಾಮಾಂತರ ಠಾಣೆ, ಸುಶ್ಮಾ ಜೆ ಭಂಡಾರಿ, ಪೊಲೀಸ್‍ ಉಪನಿರೀಕ್ಷಕರು ಪುತ್ತೂರು ಗ್ರಾಮಾಂತರ ಠಾಣೆ, ವಿಶೇಷ ತಂಡದ ಸಿಬ್ಬಂದಿಗಳಾದ ಅದ್ರಾಮ, ಪ್ರಶಾಂತ್‍ ರೈ, ಪ್ರಶಾಂತ್‍ ಎಂ, ಪ್ರವೀಣ್‍ ರೈ, ಹರ್ಷಿತ್‍, ಹಾಗೂ ಪುತ್ತೂರು ಗ್ರಾಮಾಂತರ ಠಾಣಾ ಸಿಬ್ಬಂಧಿಗಳಾದ ಪರಮೇಶ್ವರ ಗೌಡ, ಹರೀಶ್‍, ಸುಬ್ರಹ್ಮಣ್ಯ, ಬೀಮಸೇನ್‍, ಭವಿತ್ ರೈ, ನಾಗಾರಾಜ್‍, ಕಾರ್ತಿಕ್‍ ಜಿಲ್ಲಾ ಗಣಕ ಯಂತ್ರ ಸಿಬ್ಬಂದಿಗಳಾದ ದಿವಾಕರ್‍, ಸಂಪತ್‍ ರವರು ಭಾಗವಹಿಸಿರುತ್ತಾರೆ.

       

SHARE
Loading spinner

Leave a Reply

Your email address will not be published. Required fields are marked *

error: Content is protected !!