ಕಾರ್ಕಳ: ಮನೆಯಲ್ಲಿ ಕುಸಿದುಬಿದ್ದು ಯುವಕ ಮೃತ್ಯು

ಉಡುಪಿ: ಮನೆಯಲ್ಲಿ ಕುಳಿತಿದ್ದ ಯುವಕನೋರ್ವ ದಿಢೀರ್ ಆಗಿ ಕುಸಿದುಬಿದ್ದು ಮೃತಪಟ್ಟ ಘಟನೆ ಫೆ. 19ರಂದು ಕಾರ್ಕಳ ತಾಲೂಕಿನ ಎರ್ಲಪಾಡಿಯಲ್ಲಿ ನಡೆದಿದೆ. ಎರ್ಲಪಾಡಿಯ ನಿವಾಸಿ ಸುಹೇಶ್ ಕುಮಾರ್ (22) ಮೃತಪಟ್ಟ ಯುವಕ. ಇವರು 15 ದಿನಗಳಿಂದ ಕೆಮ್ಮಿನಿಂದ ಬಳಲುತ್ತಿದ್ದು, ಔಷಧಿ ತೆಗೆದುಕೊಳ್ಳುತ್ತಿದ್ದರು.

ಗುರುವಾರ ಮನೆಯಲ್ಲಿ ಕುಳಿತಿದ್ದವರು ಒಮ್ಮೇಲೆ ಕೆಳಗೆ ಬಿದ್ದು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಕಾರ್ಕಳದ ಗಾಜ್ರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ಸುಹೇಶ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ‌. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!