ಮೂಲ್ಕಿ-ಹೆಜಮಾಡಿಯಲ್ಲಿ ಜಿಪಿಎಲ್ ಉತ್ಸವ ದಶಮಾನೋತ್ಸವ ಸಂಭ್ರಮ

ಮೂಲ್ಕಿ-ಹೆಜಮಾಡಿಯ ಶ್ಯಾನುಭೋಗ್ ಕುದ್ರುವಿನಲ್ಲಿ ಏಪ್ರಿಲ್ 10ರಿಂದ 12ರವರೆಗೆ ಜಿಪಿಎಲ್ ಉತ್ಸವನ್ನು ದಶಮಾನೋತ್ಸವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಪಿಎಲ್ ಉತ್ಸವ ಸಮಿತಿಯ ಸದಸ್ಯರಾದ ಕಿರಣ್ ಶೆಣೈ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , 2017ರಲ್ಲಿ ಆರಂಭವಾದ ಈ ಉತ್ಸವ ಗೌಡ ಸಾರಸ್ವತ ಬ್ರಾಹ್ಮಣ ಸಮಾಜವನ್ನು ಒಗ್ಗೂಡಿಸುವ ಉದ್ದೇಶ ಹೊಂದಿದ್ದು, ಈ ಬಾರಿ ಮೂರು ದಿನಗಳ ಕಾಲ ಕ್ರಿಕೆಟ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದರು .

ಕರ್ನಾಟಕ, ಕೇರಳ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಂದ 16 ತಂಡಗಳು ಭಾಗವಹಿಸುವ ಕ್ರಿಕೆಟ್ ಟೂರ್ನಮೆಂಟ್ ಪ್ರಮುಖ ಆಕರ್ಷಣೆಯಾಗಿದ್ದು, ವಿಜೇತರಿಗೆ ನಗದು, ಟ್ರೋಫಿ ಹಾಗೂ ಬಹುಮಾನಗಳು ನೀಡಲಾಗುತ್ತದೆ. ಜೊತೆಗೆ ಫುಡ್ ಕೋರ್ಟ್, ಬೋಟಿಂಗ್, ಕಿಡ್ಸ್ ಝೋನ್, ಶಾಂಭವಿ ಆರತಿ, ಪೆಟ್ ಶೋ, ಕ್ರೀಡಾ ಕಾರ್ನಿವಲ್, ಒಂಟೆ-ಕುದುರೆ ಸವಾರಿ ಹಾಗೂ ಪ್ಲೀ ಮಾರುಕಟ್ಟೆ ವ್ಯವಸ್ಥೆ ಇರಲಿದೆ ಎಂದರು .

ಸಾಂಸ್ಕೃತಿಕ ವೇದಿಕೆಯಲ್ಲಿ ನೃತ್ಯ, ಸಂಗೀತ, ನಾಟಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಜಿಂಭೆ ಸಂಗೀತ, ಕೊಂಕಣಿ ನಾಟಕ ಹಾಗೂ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಜಿಪಿಎಲ್ ಉತ್ಸವ ಸಮಿತಿಯ ಸದಸ್ಯರಾದ ಗೋಪಾಲಕೃಷ್ಣ ಭಟ್ , ರಜತ್ ಭಂಡಾರ್ಕರ್ ಮತ್ತು ನಾಗೇಂದ್ರ ಶೆಣೈ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!