ಪುತ್ತೂರಿನಲ್ಲಿ ದಲಿತ ನಿಂದನೆ ಆರೋಪ ತಳ್ಳಿ ಹಾಕಿದ ಕಾಂಗ್ರೆಸ್ ಎಸ್‌ಸಿ ಘಟಕ; ಅಶೋಕ್ ರೈ ವಿರುದ್ಧದ ಆರೋಪ ರಾಜಕೀಯ ಪ್ರೇರಿತವೆಂದ ಬಾಬು ಮರಿಕೆ

ಪುತ್ತೂರು: ವಿಧಾನ ಪರಿಷತ್ ವಿರೋಧÀ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಉಪ್ಪಿನಂಗಡಿಯಲ್ಲಿ ಶಾಸಕ ಅಶೋಕ್ ರೈ ವಿರುದ್ಧ ರಾಜಕೀಯ ಹೇಳಿಕೆ ನೀಡಿ ಲೇವಡಿ ಮಾಡಿದ್ದರು. ಇದಕ್ಕೆ ಶಾಸಕರು ಕೂಡ ರಾಜಕೀಯ ಹೇಳಿಕೆ ಮೂಲಕ ಪ್ರತ್ಯುತ್ತರ ನೀಡಿದ್ದಾರೆಯೇ ಹೊರತು ಎಲ್ಲೂ ಕೂಡ ಅವರು ದಲಿತ ಸಮುದಾಯವನ್ನು ನಿಂದಿಸುವ ಹೇಳಿಕೆ ನೀಡಿಲ್ಲ ಎಂದು ಪುತ್ತೂರು ಕಾಂಗ್ರೆಸ್ ಎಸ್‌ಸಿ ಘಟಕ ಹೇಳಿದೆ.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಬಾಬು ಮರಿಕೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಶೋಕ್ ರೈ ಅವರು ತಮ್ಮ ಮಾತಿನಲ್ಲಿ ಎಲ್ಲೂ ದಲಿತ ಶಬ್ದದ ಉಲ್ಲೇಖ ಮಾಡಿಲ್ಲö. ನಾಯಿಗಳು ಒಳ್ಳೆಯವರನ್ನು ಕಂಡರೂ ಬೊಗಳುತ್ತವೆ. ಕೆಟ್ಟವರನ್ನು ಕಂಡರೂ ಬೊಗಳುತ್ತವೆ. ಅದಕ್ಕೆ ಉತ್ತರ ನೀಡಬೇಕಾಗಿಲ್ಲö. ನಾರಾಯಣ ಸ್ವಾಮಿ ಅವರು ನಾಲಾಯಕ್ ಸ್ವಾಮಿ ಎಂದು ಅಶೋಕ್ ರೈ ಹೇಳಿದ್ದಾರೆ.

ಇದೊಂದು ರಾಜಕೀಯ ಹೇಳಿಕೆಯಾಗಿದೆ. ಇಲ್ಲಿ ಎಲ್ಲೂ ದಲಿತ ಸಮುದಾಯದ ಹೆಸರು ಉಲ್ಲೇಖವಿಲ್ಲö. ನಾರಾಯಣ ಸ್ವಾಮಿ ಪ್ರತಿಪಕ್ಷದ ನಾಯಕ ಎಂಬ ಕಾರಣಕ್ಕೆ ಅವರನ್ನು ಪುತ್ತೂರಿನ ಬಿಜೆಪಿಗರು `Áಷಣ ಮಾಡಲು ಕರೆದಿದ್ದರೇ ಹೊರತು ದಲಿತ ಮುಖಂಡ ಎಂಬ ಕಾರಣಕ್ಕಲ್ಲö. ಅದೇ ರೀತಿ ತಮ್ಮ ವಿರುದ್ಧ ಮಾತನಾಡಿದ ಕಾರಣ ಶಾಸಕರು ಕೂಡ ರಾಜಕೀಯ ಉತ್ತರ ನೀಡಿದ್ದಾರೆ. ಅವರು ಎಲ್ಲಿಯೂ ದಲಿತ ಶಬ್ದ ಉಲ್ಲೇಖ ಮಾಡಿಲ್ಲ ಎಂದರು.
ಬಿಜೆಪಿ ನಾಯಕರು ಅಗನತ್ಯ ವಿವಾದ ಸೃಷ್ಟಿಸಲು ಯತ್ನಿಸಿದ್ದಾರೆ. ದಲಿತರನ್ನು ಶಾಸಕರ ವಿರುದ್ಧ ಎತ್ತಿಕಟ್ಟಲು ವಿಫಲ ಯತ್ನ ನಡೆಸಿದ್ದಾರೆ. ಆದರೆ ಪುತ್ತೂರು ಕ್ಷೇತ್ರದ ದಲಿತ ಸಮಾಜ ಶಾಸಕರ ಜತೆಯಲ್ಲಿದೆ. ದಲಿತರ ಹೆಸರು ಬಳಸಿಕೊಂಡು ಬಿಜೆಪಿ ನಾಯಕರು ರಾಜಕೀಯ ಲಾಭÀ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಬಾಬು ಮರಿಕೆ ಹೇಳಿದರು.
ಒಂದು ವೇಳೆ ಶಾಸಕರು ತಮ್ಮ ಮಾತಿನಲ್ಲಿ ದಲಿತರನ್ನು ನಿಂದಿಸುತ್ತಿದ್ದರೆ ನಾವು ಕೂಡ ಅದರ ಬಗ್ಗೆ ಮಾತನಾಡುತ್ತಿದ್ದೆವು. ಅಂಬೇಡ್ಕರ್ ಅವರನ್ನು ಕಾಂಗ್ರೆಸಿಗರೇ ಸೋಲಿಸಿದ್ದರು ಎಂದು ಬಿಜೆಪಿ ನಾಯಕ ದಿನೇಶ್ ಅಮ್ಟೂರು ಹೇಳಿದ್ದಾರೆ. ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದೇ ಕಾಂಗ್ರೆಸ್. ಅವರು ಬರೆದ ಸಂವಿಧಾನವನ್ನು ಜಾರಿಗೊಳಿಸಿದ್ದೇ ಕಾಂಗ್ರೆಸ್. ದೇಶದ ದಲಿತ ಸಮುದಾಯಕ್ಕೆ ಮೀಸಲಾತಿ ನೀಡಿದ್ದು ಕೂಡ ಕಾಂಗ್ರೆಸ್. ಇದು ದಿನೇಶ್ ಅಮ್ಟೂರು ಅವರಿಗೆ ತಿಳಿದಿರಲಿ. ಸಂವಿಧಾನಕ್ಕೆ ಅಗೌರವ ತೋರುವ ಬಿಜೆಪಿ ನಾಯಕರಿಗೆ ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆಯಿಲ್ಲö. ಪುತ್ತೂರು ಶಾಸಕರು ಕ್ಷೇತ್ರದಲ್ಲಿ ದಲಿತರ ಕಲ್ಯಾಣಕ್ಕೆ ಅನೇಕ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ದಲಿತ ಕಾಲೋನಿಗಳಿಗೆ ರಸ್ತೆö ನಿರ್ಮಿಸಿದ್ದಾರೆ. ಆರಾಧನಾ ಕೇಂದ್ರಗಳಿಗೆ ಅನುದಾನ ನೀಡಿದ್ದಾರೆ. ಅಶೋಕ ಜನಮನ ಕಾರ್ಯಕ್ರಮದ ಮೂಲಕ ಬಡವರಿಗೆ ನೆರವು ನೀಡುತ್ತಿದ್ದಾರೆ. ಅಶೋಕ್ ರೈ ಅವರಿಂದಾಗಿ ನಮಗೆ ಅಕಾರ ಸಿಗದು ಎಂಬ ಭಯದಿಂದ ಈಗ ಬಿಜೆಪಿಗರು ಸುಳ್ಳು ಹೇಳುತ್ತಿದ್ದಾರೆ ಎಂದರು.

ದಲಿತ ಸಮಾಜದ ಮುಖಂಡ ಅಣ್ಣಪ್ಪ ಕಾರೆಕ್ಕಾಡ್ ಅವರಿಗೆ ಪಕ್ಷ ನೋಡದೆ ಶಾಸಕ ಅಶೋಕ್ ರೈ ನೆರವು ನೀಡಿದ್ದಾರೆ. ಅಂಬೇಡ್ಕರ್ ಭವನ ಶಿಲಾನ್ಯಾಸ ಸಂದರ್ಭ ಅಣ್ಣಪ್ಪ ಅವರ ಕೈಯಿಂದಲೇ ಶಂಕುಸ್ಥಾಪನೆ ಮಾಡಿಸಿದ್ದಾರೆ. ಅನೇಕ ಬಾರಿ ಶಾಸಕರ ಕಚೇರಿಗೆ ಬಂದು ಶಾಸಕರ ಜತೆ ಮಾತನಾಡಿ ಹೋಗಿದ್ದಾರೆ. ಹೀಗಿರುವಾಗ ಅಣ್ಣಪ್ಪ ಕಾರೆಕ್ಕಾಡ್ ಅವರು ಶಾಸಕರ ವಿರುದ್ಧದ ಪತ್ರಿಕಾಗೋಷ್ಠಿಯಲ್ಲಿ ಹಾಜರಿರುವ ಮೂಲಕ ದ್ರೋಹ ಬಗೆದಿದ್ದಾರೆ ಎಂದು ಸೋಮನಾಥ್ ಹೇಳಿದರು.

ಉಂಡ ಮನೆಗೆ ಎರಡು ಬಗೆಯುವ ಅವರ ನಿಲುವು ನಮಗೆ ಬೇಸರ ತಂದಿದೆ ಎಂದವರು ಹೇಳಿದರು. ಹೊರಗಿನಿಂದ ಬಂದವರು ಏನೇನು ಹೇಳಿದರೂ ಪುತ್ತೂರಿನ ದಲಿತರು ಶಾಸಕ ಅಶೋಕ್ ರೈ ಅವರ ಕೈ ಬಿಡೋದಿಲ್ಲ ಎಂದು ರಾಮಣ್ಣ ಪಿಲಿಂಜ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಹಿರಿಯ ಮುಖಂಡ ಸೋಮನಾಥ್, ನಾಯಕರಾದ ಮುಕೇಶ್ ಕೆಮ್ಮಿಂಜೆ, ಪ್ರಕಾಶ್ ಹಾರಾಡಿ, ರಾಮಣ್ಣ ಪಿಲಿಂಜ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!