ಪುತ್ತೂರು: ಕೃಷಿಕರಿಂದ ಕೋವಿಗಳನ್ನು ಠೇವಣಿ ಇಟ್ಟ ಕೋವಿಗಳ ದಾಸ್ತಾನು ಕೊಠಡಿಗಳನ್ನು ಜಿಲ್ಲಾಧಿಕಾರಿಗಳ ಸೂಚನೆಯಂತೆ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ಪೊಲೀಸರ ಸಮಕ್ಷಮದಲ್ಲಿ ಫೆ.20ರಂದು ಪುತ್ತೂರಿನಲ್ಲಿ ಪರಿಶೀಲನೆ ಮಾಡಿದರು.
ರೈತರಿಂದ ಕೋವಿಗಳನ್ನು ಠೇವಣಿ ಮೂಲಕ ದಾಸ್ತಾರಿಸಿಕೊಂಡ ಪುತ್ತೂರಿನ ದೇವಕಿಕೃಪ ಮತ್ತು ಎಸ್‍ಬಿಬಿ ಕಟ್ಟಡಗಳ ಕೊಠಡಿಗಳಲ್ಲಿ ಇರಿಸಲಾಗಿದ್ದು, ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗಿಸ್ ಅವರು ಪುತ್ತೂರು ಪೊಲೀಸರ ಸಮಕ್ಷಮದಲ್ಲಿ ದೇವಿಕೃಪಾದ ಕಟ್ಟಡದ ಮೇಲಂತಸ್ತಿನಲ್ಲಿರುವ ಎರಡು ಕೊಠಡಿಗಳನ್ನು ಪರಿಶೀಲಿಸಿದರು. ಬಳಿಕ ಕೆಳಗಿನ ಅಂಗಡಿಯೊಳಗಿರುವ ಇನ್ನೊಂದು ಕೊಠಡಿಗೂ ತೆರಳಿದರು ಸಂಜೆ ವೇಳೆ ಪಕ್ಕದ ಎಸ್‍ಬಿಬಿ ಟವರ್ಸ್ ಕಟ್ಟಡದ ಕೊಠಡಿಯಲ್ಲೂ ಪರಿಶೀಲನೆ ಮಾಡಿದರು. ಈ ಸಂದರ್ಭ ತಹಶೀಲ್ದಾರ್ ಎಸ್.ಬಿ.ಕೂಡಲಗಿ, ಕಮರ್ಷಿಯಲ್ ಟ್ಯಾಕ್ಸ್ ಆಫೀಸ್‍ನ ಅಧಿಕಾರಿ ಮಂಜುನಾಥ್, ಪುತ್ತೂರು ನಗರ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಜಾನ್ಸನ್ ಡಿಸೋಜ, ಕಂದಾಯ ಅಧಿಕಾರಿ ದಯಾನಂದ ಉಪಸ್ಥಿತರಿದ್ದರು. ದೇವಕಿಕೃಪಾದ ಕಟ್ಟಡದ ಕೊಠಡಿಯ ಮೇಲಂತ್ತಿಗೆ ತೆರಳುವ ಬೀಗವನ್ನು ಮೋಹನ್ ಭಟ್ ಅವರ ಪುತ್ರ ಶ್ರೀಧರ್ ಭಟ್ ತೆರೆದರು. ಮೇಲಂತಸ್ತಿನಲ್ಲಿರುವ ಎರಡು ಕೊಠಡಿಯ ಬೀಗವನ್ನು ಗೋಪಾಲಕೃಷ್ಣ ಭಟ್ ಅವರ ಪುತ್ರ ವಿವೇಕ್ ಭಟ್ ತೆಗೆದರು. ಪರಿಶೀಲನೆ ಬಳಿಕ ಎಲ್ಲಾ ದಾಸ್ತಾನು ಕೊಠಡಿಗಳಿಗೆ ಮುದ್ರೆ ಒತ್ತಲಾಯಿತು.’