ಕೊತ್ವಾಲ್ ಪದ್ಮನಾಭ ಶೇರುಗಾರ್ ಗೆ “ಉದ್ಯೋಗ ರತ್ನ “ರಾಷ್ಟ್ರೀಯ ಪ್ರಶಸ್ತಿ

ಗಡಿನಾಡು ಕಾಸರಗೋಡಿನ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಸ್ಥಾಪಕ ಸಂಚಾಲಕರಾಗಿರುವ ಖ್ಯಾತ ಕನ್ನಡಪರ ಸಂಸ್ಥೆ ಕನ್ನಡ ಭವನದ ರಜತ ಸಂಭ್ರಮ -ಸಮಾರೋಪ ಕಾರ್ಯಕ್ರಮದಲ್ಲಿ ಬೆಳ್ಳಾರಿಯ ಖ್ಯಾತ ವರ್ಷಿಣಿ ಎಂಟರ್ಪ್ರೈಸಸ್ ಮಾಲಿಕರಾದ, ಸುಮಾರು 3500 ಉದ್ಯೋಗಾರ್ಥಿಗಳಿಗೆ ಅನ್ನದಾತರಾಗಿರುವ, ಸಾಮಾಜಿಕ ಧಾರ್ಮಿಕ ಕ್ಷೇತ್ರ ಗಳಲ್ಲಿ ಸೇವಾ ನಿರತರಾಗಿರುವ ಶ್ರೀ ಕೊತ್ವಾಲ್ ಪದ್ಮನಾಭ ಶೇರುಗಾರ್ ಇವರೀಗೆ ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ ನಲ್ಲಿ “ಉದ್ಯೋಗ ರತ್ನ “ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮ್ಮೇಳನ ಸರ್ವಾಧ್ಯಕ್ಷರಾದ ನಿವ್ರಿತ್ತ ಐ. ಎ. ಎಸ್ ಅಧಿಕಾರಿ, ಮಾಜಿ ಕರ್ನಾಟಕ ಸರಕಾರದ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಸೋಮಶೇಖರ್ ಐ. ಎ. ಎಸ್, ಶ್ರೀಮದ್ ಎಡನೀರು ಮಠ ಅದೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ತೀರ್ಥರು, ಡಾ. ಬಾಲಕೃಷ್ಣ ಎಸ್. ಮದ್ದೋಡಿ ಎಮ್. ಐ. ಟಿ. ಮಣಿಪಾಲ್ ಸೇರಿ ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ ಇವರು, ಕೋತ್ವಲ್ ಪದ್ಮನಾಭ ಶೇರುಗಾರ್ ಇವರೀಗೆ “ಉದ್ಯೋಗ ರತ್ನ ಪ್ರಶಸ್ತಿ “ಪ್ರದಾನ ಮಾಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!