ಎ.ಯು.ಪಿ ಶಾಲೆ ಆನೆಕಲ್ಲಿನಲ್ಲಿ ಸಂಭ್ರಮದ ಶಾಲಾ ವಾರ್ಷಿಕೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭ.

ಎ.ಯು.ಪಿ ಶಾಲೆ ಆನೆಕಲ್ಲಿನಲ್ಲಿ ತಾರೀಕು 17/02/2026 ಮಂಗಳವಾರದಂದು ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ 10:00 ಗಂಟೆಗೆ ಸರಿಯಾಗಿ ಶಾಲಾ ಪ್ರಬಂಧಕ ಪ್ರತಿನಿಧಿ ಶ್ರೀ ಮುರಳಿ ಶ್ಯಾಮ್ ಧ್ವಜಾರೋಹಣ ನೆರವೇರಿಸಿ ಕೊಟ್ಟರು. ಮಧ್ಯಾಹ್ನ ನಂತರ 3:00ಗೆ ಸರಿಯಾಗಿ ಸಭಾ ಕಾರ್ಯಕ್ರಮ ಆರಂಭಗೊಂಡಿತು. ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ನಿವೃತ್ತ ಐ.ಎ.ಎಸ್ ಅಧಿಕಾರಿ ಶ್ರೀ ರಾಮಣ್ಣ ನಾಯ್ಕ್ ದೀಪ ಪ್ರಜ್ವಲನೆಯ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಬಾಲ್ಯಕಾಲದ ನೆನಪುಗಳನ್ನು ಮೆಲುಕು ಹಾಕಿ ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆಯನ್ನು ಮಾಡಬೇಕೆಂದು ತಿಳಿಸಿದರು.ತಮ್ಮ ಸೇವೆಯಿಂದ ನಿವೃತ್ತಿಗೊಳ್ಳಲಿರುವ ಮುಖ್ಯ ಶಿಕ್ಷಕಿ ಶ್ರೀಮತಿ ರೇಣುಕಾ.ವಿ ಇವರನ್ನು ಎಲ್ಲರ ಸಮ್ಮುಖದಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಆ ಬಳಿಕ ಸನ್ಮಾನಿತರು ತಮ್ಮ ಸೇವಾ ಅವಧಿಯ ಅವಿಸ್ಮರಣೀಯ ಅನುಭವದ ನೆನಪುಗಳನ್ನು ನೆನೆದು ಭಾವುಕರಾದರು.

ಹಾಗೆಯೇ ಸ್ಕೌಟ್ ಮತ್ತು ಗೈಡ್ ನಲ್ಲಿ ಅತ್ಯುನ್ನತ ಪ್ರಶಸ್ತಿಯಾದ “ಮೆಡಲ್ ಆಫ್ ಮೆರಿಟ್” ಪ್ರಶಸ್ತಿಯನ್ನು ಮುಡಿಗೇರಿಸಿದ ಆನೆಕಲ್ಲು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯನಿ ಶ್ರೀಮತಿ ಶ್ರೀ ಕುಮಾರಿ.ಕೆ ಇವರನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು. ಈ ವರ್ಷ ಸೇವೆಯಿಂದ ನಿವೃತ್ತಿಗೊಳ್ಳಲಿರುವ ಮಂಜೇಶ್ವರ ಕ್ಷೇತ್ರ ಶಿಕ್ಷಣಾಧಿಕಾರಿ ಜಾರ್ಜ್ ಕ್ರಾಸ್ತಾ ಇವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಸೀನಿಯರ್ ಸೂಪರಿಡೆಂಟ್ ಶ್ರೀ ಜಿತೇಂದ್ರ ಅವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಚೇವಾರು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಶ್ಯಾಮ್ ಭಟ್ ಇವರನ್ನು ಸನ್ಮಾನಿಸಲಾಯಿತು.

ಕಾಸರಗೋಡಿನ ವಕೀಲರು ಹಾಗೂ ಆನೆಕಲ್ಲು ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಹಸನ್ ಕುಂಞಿ ಇವರನ್ನು ಗೌರವಿಸಲಾಯಿತು. ಬಾಕ್ರಬೈಲು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀನಿವಾಸ್ ರಾವ್ ಶುಭ ಹಾರೈಸಿದರು. ಹಾಗೆಯೇ ಕಳಿಯೂರು ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಟೀಚರ್, ಕೊಡ್ಲಮೊಗರು ಶಾಲೆಯ ಮುಖ್ಯ ಶಿಕ್ಷಕರಾದ ಸುಬ್ರಹ್ಮಣ್ಯ ಭಟ್ ಶುಭ ಹಾರೈಸಿದರು. ಈ ಶುಭ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಮತ್ತು ಪೋಷಕರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಈ ಶುಭ ಸಂದರ್ಭದಲ್ಲಿ ಕಳೆದ ವರ್ಷ ಕಲಿಕೆಯಲ್ಲಿ ಅತಿ ಹೆಚ್ಚು ಅಂಕವನ್ನು ಗಳಿಸಿದ ಮಕ್ಕಳಿಗೆ ಕೊಡ ಮಾಡಲ್ಪಟ್ಟ ದತ್ತಿನಿಧಿ ನಗದು ಬಹುಮಾನವನ್ನು ವಿತರಿಸಲಾಯಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಪ್ರಶಾಂತ್ ಬಗಂಬಿಲ ಹಾಗೂ ಉಪಾಧ್ಯಕ್ಷರಾದ ಅಶೋಕ್ ಮಾಸ್ಟರ್ ಕೊಡ್ಲಮೊಗರು, ಮಾತೃ ಸಂಘದ ಅಧ್ಯಕ್ಷ ಶೋಭಾ ಉಪಾಧ್ಯಕ್ಷೇ ಭವ್ಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಓಂಕಾರ ಭಜನಾ ಮಂಡಳಿ ಆನೆಕಲ್ಲಿನ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ರಾಮ ನಾಯ್ಕ ಶುಭ ನುಡಿಗಳನ್ನಾಡಿದರು.ಆನೆಕಲ್ಲು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಭಟ್ ಶುಭ ಹಾರೈಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯದಯ ಯೋಜನಾಧಿಕಾರಿ ಸುರೇಶ್ ಗೌಡ ಮಾತನಾಡಿದರು. ನಿಕಟ ಪೂರ್ವ ಅಧ್ಯಕ್ಷರಾದ ಎ.ಎಂ ಅಶ್ರಫ್ ಆನೆಕಲ್ಲು ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ರೇಣುಕಾ.ವಿ ಎಲ್ಲರನ್ನು ಸ್ವಾಗತಿಸಿ ಸಮಗ್ರ ವರದಿಯನ್ನು ವಾಚಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅನ್ವರ್ ಅಹ್ಮದ್ ಹಿತ ನುಡಿಗಳನ್ನಾಡಿದರು.ಶಾಲಾ ಪ್ರಬಂಧಕ ಪ್ರತಿನಿಧಿ ಮುರಳಿ ಶ್ಯಾಮ್ ಮಕ್ಕಳ ಹಿರಿಮೆಯನ್ನು ಕೊಂಡಾಡಿದರು.ಹಿರಿಯ ಅಧ್ಯಾಪಕರಾದ ರವಿಶಂಕರ್.ಎಸ್ ಎಲ್ಲರನ್ನೂ ವಂದಿಸಿದರು. ಜೀವನ್ ಕುಮಾರ್.ಕೆ ಮತ್ತು ರೇಖಾ ಸಿ.ಎನ್ ಕಾರ್ಯಕ್ರಮವನ್ನು ನಿರೂಪಿಸಿದರು.

ಆನಂತರ ವೇದಿಕೆಯಲ್ಲಿ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮವಾದ ಸ್ವಾಗತ ನೃತ್ಯ, ಸಮೂಹ ನೃತ್ಯ, ಕಿರು ನಾಟಕ, ಆಂಗ್ಲ ಭಾಷಾ ನಾಟಕ, ಸಮೂಹಗಾನ, ಆಧ್ಯಾಪಿಕೆಯರು ಮತ್ತು ಪೋಷಕರ ನೃತ್ಯ, ಹಾಡು, ಪಿರಮಿಡ್ ಡ್ಯಾನ್ಸ್, ಮೈಂ ಶೋ,ಮೇಳೈಸಿ ಸಭಿಕರ ಕಣ್ಮನವನ್ನು ಸೆಳೆಯಿತು. ರಕ್ಷಕ ಶಿಕ್ಷಕ ಸಂಘದ ವತಿಯಿಂದ ಎಲ್ಲಾ ಮಕ್ಕಳಿಗೆ ಪ್ರೋತ್ಸಾಹಕರ ಬಹುಮಾನವನ್ನು ವಿತರಿಸಲಾಯಿತು. ಶಾಲಾ ಅಭಿಮಾನಿಗಳು,ಪೋಷಕರು,ಊರವರು,ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗನ್ನಿತ್ತರು.

SHARE
Loading spinner

Leave a Reply

Your email address will not be published. Required fields are marked *

error: Content is protected !!