ಕಾಸರಗೋಡು: ಚಂದ್ರಗಿರಿ ಕೊಪ್ಪಲು ಶ್ರೀ ಮಹಮ್ಮಾಯಿ ಅಮ್ಮನವರ ದೇವಳದಲ್ಲಿ 55ನೇ ಪ್ರತಿಷ್ಠಾ ಮಹೋತ್ಸವಕ್ಕೆ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಕಾಸರಗೋಡು ಜಿಲ್ಲೆಯ ಚಂದ್ರಗಿರಿ ಕೊಪ್ಪಲು ಶ್ರೀ ಮಹಮ್ಮಾಯಿ ಅಮ್ಮನವರ ದೇವಳದಲ್ಲಿ ಏಪ್ರಿಲ್ 3 ರಿಂದ 5, 2026ರವರೆಗೆ ನಡೆಯಲಿರುವ 55ನೇ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ದೇವಳದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ದೇವಳದ ಅಧ್ಯಕ್ಷರಾದ ಶ್ರೀ ಲೋಕೇಶ್ ಕೊಪ್ಪಲು, ಕಾರ್ಯದರ್ಶಿ ಸೀತಾರಾಮ ಕೊಪ್ಪಲು, ಖಜಾಂಚಿ ಬಾಲಕೃಷ್ಣ ಪರಿಯಾರ, ಜೊತೆ ಕಾರ್ಯದರ್ಶಿ ಸುರೇಶ್ ತೋಟ, ಸತೀಶ್ ಪರಿಯಾರ, ಅರ್ಚಕ ದಯಾನಂದ ಕೊಪ್ಪಲು, ಹಿರಿಯ ಸದಸ್ಯರಾದ ಸತೀಶ್ ಕೆ. ದೇರೆಬೈಲು, ರವೀಂದ್ರ ಸಿ.ಹೆಚ್. ಕೊಪ್ಪಲು, ಜನಾರ್ಧನ ಪರಿಯಾರ, ಉಮೇಶ್ ಕೆ. ತುಂಗಾನಗರ, ಪ್ರವೀಣ್ ಕೊಪ್ಪಲು, ನವೀನ್ ಕಾಪಿಕಾಡು (ಉಳ್ಳಾಲ), ಪ್ರಕಾಶ್ ಮುಕ್ಕೋಟ್ಟು, ಬಾಲಕೃಷ್ಣ ಕಿನ್ಯ ಹಾಗೂ ಮಂಗಳೂರು ಶ್ರೀ ಲಕ್ಷ್ಮಣಾನಂದ ಸೊಸೈಟಿಯ ನಿರ್ದೇಶಕರಾದ ಶ್ರೀ ಜೈರಾಜ್, ಕೆ.ಸಿ. ನಾಗೇಶ್ ಕೊಂಡಾಣ, ಪ್ರಶಾಂತ್, ಸಂಜಯ್, ಸಚಿತ್ ನಾಯಕ್ ಶಾಂತರಾಮ, ಶ್ರೀಮತಿ ವೀಣಾ ಕೊಪ್ಪಲು, ಸ್ವಾತಿ ಕೊಪ್ಪಲ್ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.

ಉತ್ಸವದ ಅಂಗವಾಗಿ ದೇವಳದಲ್ಲಿ ಕೊಪ್ಪಲು ಶ್ರೀ ಗುಳಿಗ, ಶ್ರೀ ವಿಷ್ಣುಮೂರ್ತಿ, ಶ್ರೀ ದೂಮಾವತಿ, ಶ್ರೀ ವೆಂಕಟರಮಣ ಮುಡಿಪು ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ ಸ್ವಜಾತಿ ಭಾಂದವರ ವಟುಗಳಿಗೆ ಸಾಮೂಹಿಕ ಉಚಿತ ಬ್ರಹ್ಮೋಪದೇಶ, ಹಿರಿಯರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಶೈಕ್ಷಣಿಕ ಪುರಸ್ಕಾರಗಳನ್ನು ಪಡೆದವರಿಗೆ ಸನ್ಮಾನ ಕಾರ್ಯಕ್ರಮಗಳು ಜರುಗಲಿವೆ.

ಅಧ್ಯಕ್ಷ ಲೋಕೇಶ್ ಕೊಪ್ಪಲು ಹಾಗೂ ಕಾರ್ಯದರ್ಶಿ ಸೀತಾರಾಮ ಕೊಪ್ಪಲು ಉತ್ಸವದ ಕುರಿತು ಸಂಕ್ಷಿಪ್ತ ಮಾಹಿತಿ ನೀಡುತ್ತಾ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸುವಂತೆ ಮನವಿ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!