ಜನಾಧಿಪತ್ಯ ಪ್ರಕ್ರಿಯೆಯಲ್ಲಿ ಚುನಾವಣೆಯ ಮಹತ್ವವನ್ನು ತಿಳಿಸಿ, ಕನ್ನಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ” ಮತದಾರರ ಜಾಗೃತಿ” ವಾಹನಕ್ಯಾಂಪಸ್‌ಗಳತ್ತ ಪ್ರಚಾರ ಯಾತ್ರೆ ನಡೆಸಿತು.ಇಂದಿನ ಕಾರ್ಯಕ್ರಮವು ಮಂಜೇಶ್ವರದ ಗೋವಿಂದ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪ ಪ್ರಾಂಶುಪಾಲರು ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮತದಾನದ ಮಹತ್ವವನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತ ಕಲಾವಿದರಾಗಿ ಗಾಯಕರು ರಂಷಿ ಪಟ್ಟುವಂ, ಸುದೇಶ್ ಭಾಗವಹಿಸಿ ಜಾಗೃತಿ ಸಂದೇಶವನ್ನು ಸಂಗೀತದ ಮೂಲಕ ಹರಡಿದರು.
ಕುಟುಂಬಶ್ರೀ ಬ್ಲಾಕ್ ಕೋಆರ್ಡಿನೇಟರ್ ಸಚಿನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬ್ಲಾಕ್ ಕೋಆರ್ಡಿನೇಟರ್‌ಗಳಾದ ಅಥೀರಾ ಮತ್ತು ರೆಶ್ಮಾ, ಗ್ರಾಮ ಕಚೇರಿ ಸಿಬ್ಬಂದಿಗಳು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಡೆಮೊ ತೋರಿಸಿ ಮಕ್ಕಳಿಂದ ಮತದಾನ ಮಾಡಿಸಲಾಯಿತು.ಇದೇ ರೀತಿ ಕುಂಬಳದ IHRD ಕಾಲೇಜಿನಲ್ಲಿ ಕೂಡ ಕಾರ್ಯಕ್ರಮ ನಡೆಯಿತು. ಅಲ್ಲಿ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಕನ್ನಿ ಮತದಾರರು ತಮ್ಮ ಮತದಾನದ ಹಕ್ಕನ್ನು ಜವಾಬ್ದಾರಿಯಿಂದ ಉಪಯೋಗಿಸಬೇಕು ಎಂದು ಕರೆ ನೀಡಿದರು.
ಜಿಲ್ಲೆಯ ವಿವಿಧ ಕಾಲೇಜು ಕ್ಯಾಂಪಸ್‌ಗಳಲ್ಲಿ ಕನ್ನಿ ಮತದಾರರನ್ನು ನೇರವಾಗಿ ಭೇಟಿ ಮಾಡಿ, ಚುನಾವಣಾ ಪ್ರಕ್ರಿಯೆ ಹಾಗೂ ಮತದಾನದ ವಿಧಾನಗಳ ಬಗ್ಗೆ ವಿವರಿಸುವ ಉದ್ದೇಶದಿಂದ ವೋಟ್ ವಂಡಿ ಪ್ರಚಾರ ಮುಂದುವರಿಯಲಿದೆ.
Hello, i think that i saw you visited my site so i came to “return the favor”.I am trying to find things to improve my website!I suppose its ok to use some of your ideas!!