ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ನ 2026-27ನೇ ಸಾಲಿನ ವಾರ್ಷಿಕ ಯೋಜನೆ ಹಾಗೂ 14ನೇ ಹಣಕಾಸು ಆಯೋಗದ ಅನುದಾನದ ಯೋಜನಾ ತಯಾರಿಯ ಭಾಗವಾಗಿ ಹಮ್ಮಿಕೊಳ್ಳಲಾದ ‘ಅಭಿವೃದ್ಧಿ ಸೆಮಿನಾರ್’ ಮಂಜೇಶ್ವರದ ಎ ಕೆ ಗಾರ್ಡನ್ನಲ್ಲಿ ಅತ್ಯಂತ ವ್ಯವಸ್ಥಿತವಾಗಿ ಜರುಗಿತು.ಮುಂಬರುವ ಹಣಕಾಸು ವರ್ಷದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ಮತ್ತು ತಂತ್ರಗಳನ್ನು ರೂಪಿಸುವ ನಿಟ್ಟಿನಲ್ಲಿ ಈ ಸೆಮಿನಾರ್ ಆಯೋಜಿಸಲಾಗಿತ್ತು. ಇದಕ್ಕೂ ಮುನ್ನ, ಕಳೆದ ಫೆಬ್ರವರಿ 9 ರಿಂದ ಫೆಬ್ರವರಿ 17ರ ವರೆಗೆ ಪಂಚಾಯತ್ನ ವಿವಿಧ ವಾರ್ಡ್ಗಳಲ್ಲಿ ಗ್ರಾಮ ಸಭೆಗಳನ್ನು ಹಾಗೂ ವರ್ಕಿಂಗ್ ಗ್ರೂಪ್ ಸಭೆಗಳನ್ನು ನಡೆಸಲಾಗಿತ್ತು. ಆ ಸಭೆಗಳಲ್ಲಿ ಸಾರ್ವಜನಿಕರಿಂದ ಬಂದಂತಹ ಪ್ರಮುಖ ಬೇಡಿಕೆಗಳು, ಸಲಹೆಗಳು ಮತ್ತು ನಿರ್ದೇಶನಗಳನ್ನು ಕ್ರೋಢೀಕರಿಸಿ, ಲಭ್ಯವಿರುವ ಸಂಪನ್ಮೂಲಗಳಿಗೆ ಅನುಗುಣವಾಗಿ ಸಿದ್ಧಪಡಿಸಲಾದ ‘ಕರಡು ವಾರ್ಷಿಕ ಯೋಜನೆ’ಯನ್ನು ಈ ಸೆಮಿನಾರ್ನಲ್ಲಿ ಪ್ರಸ್ತುತಪಡಿಸಲಾಯಿತು.
ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಶೀರ್ ಕನಿಲ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭವನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಸೈಫುಲ್ಲಾ ತಂಘಲ್ ಅವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸೈಫುಲ್ಲಾ ತಂಘಲ್ ಅವರು ( Byt1) ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನರ ನೇರ ಸಹಭಾಗಿತ್ವದೊಂದಿಗೆ ಯೋಜನೆಗಳನ್ನು ರೂಪಿಸುವುದು ಪ್ರಜಾಪ್ರಭುತ್ವದ ಆಶಯವಾಗಿದೆ. ಮೂಲಭೂತ ಸೌಕರ್ಯಗಳ ಜೊತೆಗೆ ಜನರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಆದ್ಯತೆ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.
ಅದೇ ರೀತಿ ಅಧ್ಯಕ್ಷತೆಯನ್ನು ವಹಿಸಿದ ಪಂಚಾಯತು ಅಧ್ಯಕ್ಷ ಬಶೀರ್ ಕನಿಲ ರವರು ಮಾತನಾಡಿ (byt.2) ಈ ಸಲ ಅಧಿಕಾರಕ್ಕೇರಿದ ನೂತನ ಸಮಿತಿ ಪ್ರತಿಯೊಂದು ಅಭಿವೃದ್ಧಿ ಕಾರ್ಯದಲ್ಲೂ ಮುತುವರ್ಜಿ ನೀಡುವುದರ ಜೊತೆಗೆ ಗುಬ್ಬೆದ್ದು ನಾರುತ್ತಿರುವ ತ್ಯಾಜಗಳಿಗೆ ಶಾಶ್ವತ ಪರಿಹಾರ ಕಂಡು ಕೊಳ್ಳುವುದಾಗಿ ಭರವಸೆ ನೀಡಿದರು.
ಅದೇ ರೀತಿ ಪಂಚಾಯತ್ ಕಾರ್ಯದರ್ಶಿ ಸುಮೇಶ್ ರವರು ಮಾತನಾಡಿ (byt 3) ಗ್ರಾಮಸಭೆಗಳಲ್ಲಿ ಸಾರ್ವಜನಿಕರು ನೀಡಿದ ಪ್ರತಿಯೊಂದು ಸಲಹೆಗಳನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ವರ್ಕಿಂಗ್ ಗ್ರೂಪ್ ಸಭೆಗಳಲ್ಲಿ ಆಯಾ ಕ್ಷೇತ್ರಗಳ ತಜ್ಞರೊಂದಿಗೆ ಚರ್ಚಿಸಿ, ಅಗತ್ಯತೆ ಮತ್ತು ಲಭ್ಯವಿರುವ ಅನುದಾನದ ನಡುವೆ ಸಮತೋಲನ ಕಾಯ್ದುಕೊಂಡು ಈ ಕರಡು ಯೋಜನೆಯನ್ನು ಸಿದ್ಧಪಡಿಸಲಾಗುವುದಾಗಿ ಅವರು ಹೇಳಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪಾತಿಮತ್ ಝವುರಾ, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಫರ್ಹಾನ ಟೀಚರ್, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರಾದ ಹರ್ಷಾದ್ ವರ್ಕಾಡಿ ಅವರು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಅಲ್ಲದೆ, ಪಂಚಾಯತ್ ಸದಸ್ಯರಾದ ಇಲ್ಯಾಸ್ ತೂಮಿನಾಡು, ಮುಕ್ತಾರ್ ಎ, ಅಬ್ದುಲ್ ರಹ್ಮಾನ್ ಹಾಜಿ, ಬ್ಲಾಕ್ ಉಪಾಧ್ಯಕ್ಷೆ ಕಮಲಾಕ್ಷಿ, ಹನೀಫ್ ಕುಚ್ಚಿಕ್ಕಾಡ್, ಅಝೀಝ್ ಹಾಜಿ ಸೇರಿದಂತೆ ಗ್ರಾಮಪಂಚಾಯತು ವ್ಯಾಪ್ತಿಯಲ್ಲಿ ಬರುವ ಜನಪ್ರತಿನಿಧಿಗಳು, ಯೋಜನೆ ಸಮಿತಿಯ ಸದಸ್ಯರು, ವರ್ಕಿಂಗ್ ಗ್ರೂಪಿನ ಸದಸ್ಯರು, ಗ್ರಾಮಸಭೆಯಿಂದ ಆಯ್ಕೆಮಾಡಿದ ಸದಸ್ಯರು, ಕಾರ್ಯನಿರ್ವಾಹಕ ಅಧಿಕಾರಿಗಳು, ಎ ಡಿ ಎಸ್ ಪ್ರತಿನಿಧಿಗಳು, ಸಿ ಡಿ ಎಸ್ ಸದಸ್ಯರು, ಎಸ್ ಸಿ ಪ್ರೊಮೋಟರ್, ಎಸ್ ಟಿ ಪ್ರೊಮೋಟರ್, ಬೇಂಕ್ ಪ್ರತಿನಿಧಿಗಳು, ಸ್ವಯಂಸೇವಕರು ಪಾಲ್ಗೊಂಡರು
ಈ ಸೆಮಿನಾರ್ನ ಮುಖ್ಯ ಉದ್ದೇಶವೆಂದರೆ ಕರಡು ಯೋಜನೆಯಲ್ಲಿ ಅಡಕವಾಗಿರುವ ಅಭಿವೃದ್ಧಿ ತಂತ್ರಗಳನ್ನು ವಿಶ್ಲೇಷಿಸಿ, ಗ್ರಾಮದ ಸಮಗ್ರ ಸುಧಾರಣೆಗೆ ಪೂರಕವಾದ ಯೋಜನೆಗಳಿಗೆ ಅಂತಿಮ ರೂಪ ನೀಡುವುದು. ಸಭೆಯಲ್ಲಿ ಬಂದ ನಿರ್ಧಾರಗಳ ಆಧಾರದ ಮೇಲೆ ಅಂತಿಮ ಯೋಜನೆಯನ್ನು ಜಾರಿಗೊಳಿಸಲು ಪಂಚಾಯತ್ ಆಡಳಿತ ಸಮಿತಿ ಮುಂದಾಗಲಿದೆ.
Yes