ಕಾಸರಗೋಡು–ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026: ವಿಜಯ್ ಕುಮಾರ್‌ಗೆ “ಕನ್ನಡ ಕಟ್ಟಾಳು” ಪ್ರಶಸ್ತಿ

ಕಾಸರಗೋಡು: ಕಾಸರಗೋಡು ಕನ್ನಡ ಭವನದ ರೂವಾರಿ ಡಾ. ವಾಮನ್ ರಾವ್ ಬೇಕಲ್ ಅವರಿಂದ ಕರ್ನಾಟಕ ರಾಜ್ಯ ಸಂಚಾಲಕರು ಹಾಗೂ ಕನ್ನಡ ಹೋರಾಟಗಾರ ನಂ. ವಿಜಯ್ ಕುಮಾರ್ (ವಿಜಿ) ಅವರಿಗೆ “ಕನ್ನಡ ಕಟ್ಟಾಳು” ಬಿರುದಾಂಕಿತ ಪ್ರಶಸ್ತಿ ಪ್ರದಾನಿಸಲಾಯಿತು.ಕೇರಳ ರಾಜ್ಯ–ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಭವನ ಪ್ರಾಯೋಜಿಸಿದ “ಕಾಸರಗೋಡು–ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026” ಕಾರ್ಯಕ್ರಮದಲ್ಲಿ ಈ ಗೌರವ ನೀಡಲಾಯಿತು.

ಕೇರಳ ರಾಜ್ಯ ಬಿಜೆಪಿ ಕೊಝಿಕೋಡ್ ವಲಯ ಅಧ್ಯಕ್ಷ ಅಡ್ವೋ. ಎ. ಶ್ರೀನಾಥ್, ಡಾ. ವಾಮನ್ ರಾವ್ ಬೇಕಲ್, ಸಂದ್ಯಾ ರಾಣಿ ಟೀಚರ್, ಡಾ. ಕೆ.ಏನ್. ವೆಂಕಟ್ರಮಣ ಹೊಳ್ಳ , ಶ್ರೀ ಶ್ರೀ ರಮೇಶ್ ಮಹಾಸ್ವಾಮಿಗಳು, ಗೋವಿನಾಳ, ಲಕ್ಷ್ಮೇಶ್ವರ ಇವರ ದಿವ್ಯ ಕರಗಳಿಂದ ಪ್ರಶಸ್ತಿ ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಕ.ಸಾ.ಪ ಗಡಿನಾಡ ಘಟಕ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಡಾ. ಶಾಂತ ಪುತ್ತೂರು, ರಾಧಾಕೃಷ್ಣ ಕೆ. ಉಳಿಯತಡ್ಕ, ಸಂ.ನ. ತಮ್ಮನಗೌಡ್ರ ಗದಗ, ಗುರುಪ್ರಸಾದ್ ಕೋಟೆಕಣಿ, ಬಿಜೆಪಿ ಕೌನ್ಸಿಲರ್ ಶಂಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!