ಬಂಟ್ವಾಳದಲ್ಲಿ ಅಕ್ರಮ ಕಪ್ಪುಕಲ್ಲು ಗಣಿಗಾರಿಕೆ ವಿರೋಧಿಸಿ ಹಠಾತ್ ಪ್ರತಿಭಟನೆ

ಬಂಟ್ವಾಳ: ಸ್ಫೋಟಕ ವಸ್ತುಗಳನ್ನು ಬಳಸಿ ಅಕ್ರಮವಾಗಿ ಕಪ್ಪು ಕಲ್ಲಿನ ಕೋರೆಯ ವಿರುದ್ದ ಗ್ರಾಮಸ್ಥರು ಹಠಾತ್ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದ ಘಟನೆ ಫೆ. 24 ರಂದು ಮಂಗಳವಾರ ರಾತ್ರಿ ನಡೆದಿದೆ.ರಾಯಿ ಗ್ರಾಮದ ಲಕ್ಷ್ಮಿಕೋಡಿ ಎಂಬಲ್ಲಿ ನಡೆಯುತ್ತಿರುವ ಕಪ್ಪು‌ಕಲ್ಲಿನ ಗಣಿಗಾರಿಕೆಯಲ್ಲಿ‌ ಅಕ್ರಮ ಸ್ಪೋಟಕ ಉಪಯೋಗಿಸುವ ಬಗ್ಗೆ ಹಾಗೂ ಘನ ವಾಹನಗಳ ಸಂಚಾರಿಂದ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವಾಗುತ್ತಿರುವ ಬಗ್ಗೆ ಆರೋಪಿಸಿ ಕೋರೆಗೆ ಬರುವ ವಾಹನಗಳನ್ನು ತಡೆದು ಹೊರಂಗಳ ಗ್ರಾಮಸ್ಥರು ರಸ್ತೆ ಮದ್ಯೆ ಪ್ರತಿಭಟಿಸಿದ್ದಾರೆ.

ರಾಯಿ ಗ್ರಾಮದ ಲಕ್ಷ್ಮಿಕೋಡಿ ಎಂಬಲ್ಲಿ ಕೃಷಿ ಭೂಮಿಯಲ್ಲಿದ್ದ ಬಂಡೆಕಲ್ಲನ್ನು ತೆರವುಗೊಳಿಸುವ ನೆಪದಲ್ಲಿ ಕಪ್ಪು ಕಲ್ಲಿನ ಗಣಿಗಾರಿಕೆ ನಡೆಸಲು,‌ ಗಣಿಗಾರಿಕೆ ಇಲಾಖೆಯಿಂದ 23 ಶರ್ತಗಳ ಮೇರೆಗೆ ಅನುಮತಿ ನೀಡಿರುತ್ತಾರೆ.ಅದರೆ ಶರ್ತಗಳನ್ನು ಉಲಂಘನೆ ಮಾಡಿ ಮಾರಕ ಸ್ಪೋಟಕಗಳನ್ನು ಬಳಸಿ ಜನಸಾಮನ್ಯರಿಗೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳುಗೆ ತೊಂದರೆಯನ್ನುಂಟು ಮಾಡಿದೆ. ಗ್ರಾಮಾಂತರ ರಸ್ತೆಯಲ್ಲಿ ಘನ ವಾಹನ ಸಂಚಾರಿಸಲು ಅವಕಾಶ ಇಲ್ಲದಿದ್ದರೂ ಕೂಡ ಗಣಿಗಾರಿಕೆಯ ಮೂಲಕ ಹೊಡೆದ ಬಂಡೆಕಲ್ಲುಗಳನ್ನು16 ವೀಲ್ ಬ್ರಹತ್ ಟ್ರಕ್ ನಲ್ಲಿ ಸಾಗಿಸಿ ಕೊಯಿಲ ಹೋರಂಗಳ ಗ್ರಾಮಾಂತರ ಕಿರಿದಾದ ರಸ್ತೆಯು ಸಂಪೂರ್ಣ ಕೆಟ್ಟು ಹೋಗಿದೆ.

ಹತ್ತು ದಿನಗಳ ಹಿಂದೆಯಷ್ಟೆ ಈ ಬ್ರಹತ್ ಗಾತ್ರದ ಟ್ರಕ್ ಗಳನ್ನು ಈ ರಸ್ತೆಯಿಂದ ಸಂಚಾರಿಸಬಾರದಾಗಿ ಬಂಟ್ವಾಳ ಪೊಲೀಸ್ ಠಾಣೆಯ ಸಬ್ ಇನ್ಸ್ ಫೆಕ್ಟರ್ ಖಡಕ್ ವಾರ್ನಿಂಗ್ ನೀಡಿದ್ದರೂ ಲೆಕ್ಕಿಸದೆ ಮತ್ತೆ ಫೆ.24 ರಂದು ಸುಮಾರು ಸಂಜೆ 7 ಗಂಟೆಗೆ 3 ಬ್ರಹತ್ ಟ್ರಕ್ ಗಳು ರಸ್ತೆ ಪೂರ್ತಿ ಆವರಿಸಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು. ನಂತರ ಸ್ಥಳಕ್ಕೆ ಬಂದ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಯವರು ಟ್ರಾಕ್ ಗಳನ್ನು ವಶಕ್ಕೆ ಪಡಕೊಂಡು ಪ್ರಕರಣ ದಾಖಲಿಸಿದ್ದಾರೆ. ಅ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಹಿಂದೆಕ್ಕೆ ಪಡೆದಿದ್ದಾರೆ.

ಗಣಿಗಾರಿಕೆಯಲ್ಲಿ ಮಾರಕ ಸ್ಪೊಟಕಗಳು ಬಳಸುತ್ತಿದ್ದು ಜನ ಸಾಮಾನ್ಯರಿಗೆ ಹಾಗೂ ಕೃಷಿಗೆ ಬಹಳ ತೊಂದರೆಯಾಗಿದೆ. ಇಕ್ಕಟ್ಟಾದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿ ರಸ್ತೆ ಜರಿತ ಹಾಗೂ ಗುಂಡಿಗಳಿಂದ ಪ್ರಾಣಾಪಾಯ ಇರುವುದರಿಂದ‌. ಗಣಿಗಾರಿಕೆಯ ಅನುಮತಿಯನ್ನು ರದ್ದುಗೊಳಿಸಿ. ತುರ್ತಾಗಿ ರಸ್ತೆ ದುರಸ್ತಿಪಡಿಸಿ ಪ್ರಾಣಾಪಾಯದಿಂದ ಕಾಪಾಡಬೇಕು ಎಂದು ಸಂಬಂಧಪಟ್ಟ ಇಲಾಖೆಯವರಲ್ಲಿ ವಿನಂತಿಸಿಕೊಂಡಿರುವ ಗ್ರಾಮಸ್ಥರು ಬೇಡಿಕೆ ಈಡೇರದೆ ಗಣಿಗಾರಿಕೆಯಿಂದ ಗ್ರಾಮಸ್ಥರಿಗೆ ತೊಂದರೆಯಾದರೆ ಮುಂದೆ ಉಗ್ರ ಹೋರಾಟ ಮಾಡುವುದಾಗಿ‌ ಎಚ್ಚರಿಕೆ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!