ಉಡುಪಿ: ಯುವವಾಹಿನಿ ಉಡುಪಿ ಘಟಕದ ರಜತ ಸಂಭ್ರಮದ ಸಮಾರೋಪ ಸಮಾರಂಭವು ಇದೇ ಫೆ. 28 ಮತ್ತು ಮಾರ್ಚ್ 1ರಂದು ಬನ್ನಂಜೆ ನಾರಾಯಣ ಗುರು ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಯುವವಾಹಿನಿ ಉಡುಪಿ ಘಟಕದ ದಯಾನಂದ ಕರ್ಕೇರ ತಿಳಿಸಿದರು.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಜತ ಸಂಭ್ರಮದ ಸವಿ ನೆನಪಿಗಾಗಿ ವಿದ್ಯಾರ್ಥಿಗಳಿಗೆ ಯುವ ಸ್ಪಂದನಾ, ಯುವ ಪ್ರೇರಣಾ, ಗುರು ಸನ್ಮತಿ, ಅಸಹಾಯಕ ಕುಟುಂಬಕ್ಕೆ ತಲೆಗೊಂದು ಸೂರಿನ ಯೋಜನೆಯಾದ ಮನೆ ನಿರ್ಮಾಣ, ವಿದ್ಯಾರ್ಥಿ ವೇತನದ ವಿದ್ಯಾನಿಧಿ, ವಿವಿಧ ಕಾರ್ಯಾಗಾರ, ತರಬೇತಿ ಕಾರ್ಯಕ್ರಮ ಸೇರಿ ಒಟ್ಟು 25 ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದರು.
ಫೆ. 28ರಂದು ಉಡುಪಿ ಜಿಲ್ಲೆಯ ವಿವಿಧ ಬಿಲ್ಲವ ಸಂಘಗಳಿಗೆ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ‘ಯುವ ಸಂಗಮ’ ನಡೆಯಲಿದ್ದು, ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಉದ್ಘಾಟನೆ ಮಾಡಲಿದ್ದಾರೆ. ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಹೇಳಿದರು.ಮಾರ್ಚ್ 1ರಂದು ಬೆಳಿಗ್ಗೆ 9.30ಕ್ಕೆ ನಡೆಯುವ ‘ಯುವ ಸದ್ಭಾವನ’ ಯುವ ಬಿಲ್ಲವ ಸಮಾವೇಶ ಕಾರ್ಯಕ್ರಮವನ್ನು ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಎಚ್ ಕೆ. ಕೃಷ್ಣ ಮೂರ್ತಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಉದ್ಯಮ ಕ್ಷೇತ್ರದ ಸಾಧಕರಾದ ರಾಮಚಂದ್ರ ಮಾಬಿಯಾನ್, ಪ್ರಕಾಶ್ ಕರ್ಕೇರ, ಪ್ರಭಾಕರ ಪೂಜಾರಿ, ಶೈಕ್ಷಣಿಕ ಕ್ಷೇತ್ರದ ಸಾಧಕರಾದ ಡಾ. ಸುನೀತಾ ವಿ ಅವರಿಗೆ ರಜತ ರತ್ನ ಗೌರವಾರ್ಪಣೆ ನಡೆಯಲಿದೆ. ಬಳಿಕ ಗುರು ಸನ್ಮತಿ ಸ್ಪರ್ಧಾ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಆ ನಂತರ ಯುವವಾಹಿನಿ ಸದಸ್ಯರಿಂದ “ಯುವವೈವಿಧ್ಯ” ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಮಧ್ಯಾಹ್ನ 2.30ಕ್ಕೆ “ಯುವ ಸಿರಿ” ಕಾರ್ಯಕ್ರಮ ನಡೆಯಲಿದೆ. ಸಂಜೆ 5ಗಂಟೆಗೆ ರಾಕೇಶ್ ಕಟಪಾಡಿ ನಿರ್ದೇಶನದಲ್ಲಿ ಯುವವಾಹಿನಿ ಸದಸ್ಯರಿಂದ “ಮಣ್ಣದೈಸಿರ” ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ. ಬಳಿಕ ರವಿ ಕುಮಾರ್ ಕಡೆಕಾರ್ ನಿರ್ದೇಶನದಲ್ಲಿ ಕೋಟಿ ಚೆನ್ನಯ್ಯರ ಜೀವನಾಧರಿತ ‘ಸತ್ಯೋದ ಬೊಳ್ಳಿಲು” ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಜತ ಸಂಭ್ರಮದ ಸಂಚಾಲಕ ರಘುನಾಥ್ ಮಾಬಿಯಾನ್, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್, ಸಮಿತಿಯ ಸ್ಥಾಪಕಾಧ್ಯಕ್ಷ ಪ್ರವೀಣ್ ಕುಮಾರ್, ಮಾಜಿ ಅಧ್ಯಕ್ಷ ನಾರಾಯಣ ಬಿ.ಎಸ್. ಇದ್ದರು
GamesPH is where it’s at! Been having a blast on their site. Good selection of games and it’s pretty smooth overall. Worth a shot if you’re looking for something new. Find them at gamesph
Just signed up with EE11BET. The site looks slick, and they seem to have some decent promos. Gonna give it a whirl tonight and see how it goes! Give it a shot! Go to ee11bet
Trying to become a SLOTMAX VIP! Hoping for some boosted rewards and exclusive access. The slots are pretty fun so far. Wish me luck! Join now! slotmax vip