ಅವ್ಯಸ್ಧೆಯಿಂದ ಸಾವು, ಕೂಡಲೇ ಪರಿಹಾರ ಘೋಷಿಸಿ-ಭೋವಿ ಮುಖಂಡ ಪವನ್ ಕುಮಾರ್ ಶಿರ್ವ

ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಬಂದಿರುವ ತಮಿಳುನಾಡು ಕಾರ್ಮಿಕನ ಸಾವಿಗೆ ಸರ್ಕಾರದ ಅವ್ಯವಸ್ಥೆಯೇ ನೇರ ಕಾರಣ… ಈ ಘಟನೆ ನಡೆದು ಎರಡು ದಿನಗಳಾದರೂ ಯಾವುದೇ ಸ್ಥಳೀಯ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಪರಿಹಾರದ ಭರವಸೆ ನೀಡಿಲ್ಲ… ಇಂಥ ನಿರ್ಲಕ್ಷ ಸಲ್ಲದು.. ಅಲ್ಲಿರುವ ಅವ್ಯವಸ್ಥೆಯನ್ನು ಸರ್ಕಾರ ಮತ್ತು ಮೀನುಗಾರಿಕೆ ಇಲಾಖೆ ಕೂಡಲೇ ಸರಿಪಡಿಸಬೇಕು.. ಅಲ್ಲಿ ಎಲ್ಲಾ ಬಡ ಜನಾಂಗದವರೇ ನಾ ಹೊಟ್ಟೆಪಾಡಿಗೆ ದುಡಿದುಕೊಂಡಿದ್ದು ಸರ್ಕಾರದ ಅಭಿವೃದ್ಧಿಯ ವೈಫಲ್ಯದಿಂದ ಜನರು ಸಾವಿಗೀಡಾಗಬೇಕಾಗಿದೆ.. ಈ ಸಮಸ್ಯೆಯಿಂದ ಇನ್ನಷ್ಟು ಜೀವ ಬಳಿ ಪಡೆಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಮೃತ ಪಟ್ಟ ಕಾರ್ಮಿಕನ ಕುಟುಂಬಕ್ಕೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು… ಕುಟುಂಬಕ್ಕೆ ಆಸರೆಯಾಗಿದ್ದ ಕಾರ್ಮಿಕನ ಸಾವಿನಿಂದ ಕಂಗಾಲಾಗಿರುವ ಕುಟುಂಬಕ್ಕೆ ಕೂಡಲೇ ಆಸರೆ ಒದಗಿಸಬೇಕು.. ಇವರು ನಮ್ಮ ರಾಜ್ಯದವರಲ್ಲ, ತಮಿಳುನಾಡಿನ ವ್ಯಕ್ತಿ ಎಂದು ಪರಿಹಾರ ನೀಡಲು ಹಿಂದೇಟು ಹಾಕಿದ್ದಲ್ಲಿ ಸರ್ಕಾರದ ವಿರುದ್ಧ ಮತ್ತು ಮೀನುಗಾರಿಕೆ ಇಲಾಖೆ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ಭೋವಿ ಮುಖಂಡ ಪವನ್ ಕುಮಾರ್ ಶಿರ್ವ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!