ಅಕ್ರಮ ಗೋಹತ್ಯಾ ಕೇಸ್ ಫೈಲ್: ಆರೋಪಿಯ ಮನೆ ಆವರಣ ಜಪ್ತಿ

ಅಕ್ರಮ ಗೋಹತ್ಯಾ ಕೇಸ್ ಗೆ ಸಂಬಂಧಿಸಿದಂತೆ ಮನೆ ಆವರಣವನ್ನು ಜಪ್ತಿ ಮಾಡಿದ ಘಟನೆ ಬೆಳ್ತಂಗಡಿ ಬಾರ್ಯ ಗ್ರಾಮದ ಹೊಸವಕ್ಲು ಎಂಬಲ್ಲಿ ನಡೆದಿದೆ. ಮನೆಯೊಂದರ ಆವರಣದಲ್ಲಿ ಅಕ್ರಮವಾಗಿ ಗೋಹತ್ಯೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್ಐ ಸಿಬ್ಬಂದಿಗಳೊಂದಿಗೆ ಸ್ಥಳದಲ್ಲಿದ್ದ ಹೆಚ್‌ ಅಬ್ದುಲ್‌ ರಹಿಮಾನ್‌ ಎಂಬವರ ಮನೆಯ ಬಳಿ ಹೋದಾಗ, ಮನೆಯ ಆವರಣದಿಂದ ಇಬ್ಬರು ವ್ಯಕ್ತಿಗಳು ಓಡಿಹೋಗಿದ್ದಾರೆ.

ಸ್ಥಳವನ್ನು ಪರಿಶೀಲಿಸಿದಾಗ ಗೋಮಾಂಸವನ್ನು ಪ್ಯಾಕೆಟ್ ಮಾಡಿಡಲಾಗಿದ್ದು, ಸಮೀಪದಲ್ಲಿದ್ದ ರಿಕ್ಷಾದಲ್ಲಿಯೂ ಗೋಮಾಂಸದ ಪ್ಯಾಕೆಟ್ ಗಳು ಪತ್ತೆಯಾಗಿದೆ. ಒಟ್ಟು 56 ಕೆಜಿ ಮಾಂಸ ಪತ್ತೆಯಾಗಿದೆ. ಮುಂದಿನ ಕಾನೂನುಕ್ರಮಕ್ಕಾಗಿ ಸ್ಥಳದಲ್ಲಿದ್ದ ಗೋಮಾಂಸ, ತೂಕದ ಯಂತ್ರ, ರಿಕ್ಷಾ, ಮೊಬೈಲ್ ಹಾಗೂ ಇತರೆ ಸೊತ್ತುಗಳನ್ನು ವಶಕ್ಕೆ ಪಡೆದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 27/2026, ಕಲಂ: 4, ಮತ್ತು 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಕಲಂ:3(5)) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡು, ಪ್ರಕರಣದ ಆರೋಪಿ ಹೆಚ್‌ ಅಬ್ದುಲ್‌ ರಹಿಮಾನ್‌ ಎಂಬವರು ಜಾನುವಾರುಗಳ ವಧೆಗಾಗಿ ಬಳಸಿದ್ದ ಮನೆಯ ಆವರಣವನ್ನು ಜಪ್ತಿ ಮಾಡಲಾಗಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!