ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಲಿಪಿಕ ನೌಕರರ,ವಾಹನ ಚಾಲಕರ ಮತ್ತು ಗ್ರೂಪ್ ಡಿ.ನೌಕರರ ಸಂಘ (ರಿ.) ಬೆಂಗಳೂರು ಇದರ ದ.ಕ.ಜಿಲ್ಲೆಯ 2025 -2029 ಅವಧಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ರಾಜ್ಯ ಸಂಘದ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಹಾಗೂ ನಿವೃತ್ತ ಬೊಧಕೇತರ ನೌಕರರಿಗೆ ಗೌರವಾಭಿನಂದನೆ ಕಾರ್ಯಕ್ರಮ ಮೊಡಂಕಾಪು ಅನುಗ್ರಹ ಹಾಲ್ ನಲ್ಲಿ ನಡೆಯಿತು.
ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಲಿಪಿಕ ನೌಕರರ, ವಾಹನ ಚಾಲಕರ ಮತ್ತು ಗ್ರೂಪ್ ಡಿ ನೌಕರರ ಸಂಘದ ಅಧ್ಯಕ್ಷ ನವೀನ್ ಎಸ್.ಆರ್. ಅವರು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಸಂಘಟನೆಯ ಉದ್ದೇಶಗಳನ್ನು ಅರಿತುಕೊಂಡು ಒಗ್ಗಟ್ಟಿನಿಂದ ಸಾಧನೆಯಡೆ ನಡೆಯಬೇಕಾಗಿದೆ.ಪ್ರಸ್ತುತ ದಿನಗಳಲ್ಲಿ ಅಧಿಕಾರಿಗಳು ನೌಕರರು ಬಹಳ ಒತ್ತಡದಲ್ಲಿದ್ದಾರೆ.ಆದರೆ ಕಚೇರಿಯಲ್ಲಿ ಕಾರ್ಯಭಾರವನ್ನು ತಂಡವಾಗಿ ಮಾಡಿದಾಗ ಒಂದಷ್ಟು ನೆಮ್ಮದಿ ಸಿಗಬಹುದು ಎಂದರು.ಸರ್ಕಾರದ ಮೇಲೆ ಸಕಾರಾತ್ಮಕ ವಾಗಿ ವ್ಯವಸ್ಥೆಯಲ್ಲಿ ಗುಣಮಟ್ಟದಲ್ಲಿ ಬದಲಾವಣೆ ತರುವ ಬಗ್ಗೆ ಗಮನಕ್ಕೆ ತರುವ ಕೆಲಸ ಮಾಡುವ ಎಂದು ಅವರು ಹೇಳಿದರು.
ಸವಾಲುಗಳ ನಡುವೆ ಕೆಲಸ ಮಾಡುವ ಸರಕಾರಿ ನೌಕರರು, ಅಧಿಕಾರಿಗಳು ಮತ್ತು ವ್ಯವಸ್ಥೆ ಒಟ್ಟಾಗಿ ಕೆಲಸ ಮಾಡೋಣ ಎಂಬ ಸಲಹೆ ನೀಡಿದರು.ಜಿಲ್ಲಾಧ್ಯಕ್ಷ ಹರ್ಷೇಂದ್ರ ಶೆಟ್ಟಿ ಬಿ.ಡಿ. ಅಧ್ಯಕ್ಷತೆ ವಹಿಸಿದ್ದು, ರಾಜ್ಯ ಗೌರವಾಧ್ಯಕ್ಷ ದೇವರಾಜು ಜಿ. ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.
ಮುಖ್ಯ ಅತಿಥಿ ದ.ಕ.ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಆಡಳಿತ ಉಪನಿರ್ದೇಶಕ(ಡಿಡಿಪಿಐ) ಶಶಿಧರ್ ಜಿ.ಎಸ್. , ಜಿಲ್ಲಾ ಅಕ್ಷರ ದಾಸೋಹ ಉಪನಿರ್ದೇಶಕ ಜ್ಞಾನೇಶ್ ಎಂ.ಪಿ., ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ, ರಾಜ್ಯ ಸಂಘದ ಕಾರ್ಯಾಧ್ಯಕ್ಷ ಪೃಥ್ವಿಕುಮಾರ್, ದ.ಕ.ಜಿಲ್ಲಾ ಗೌರವಾಧ್ಯಕ್ಷ ಶ್ರೀಧರನ್, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಕೆ.ಆರ್, ಪ್ರಧಾನ ಕಾರ್ಯದರ್ಶಿ ಸ್ವಸ್ತಿಕ್ ಕುಮಾರ್, ಖಜಾಂಚಿ ಮಾರುತಿ, ಸಂಘಟನಾ ಕಾರ್ಯದರ್ಶಿ ಕಿರಣ್ ಎಸ್. ಹಾಗೂ ವಿವಿಧ ತಾಲೂಕುಗಳ ಅಧ್ಯಕ್ಷರು ಉಪಸ್ಥಿತರಿದ್ದರು.ಮಂಗಳೂರು ವಿಶೇಷ ಘಟಕದ ಅಧ್ಯಕ್ಷೆ ವಿ.ಆರ್.ಶೋಭಾ ಸ್ವಾಗತಿಸಿದರು. ಗೌರವಾಧ್ಯಕ್ಷ ಬಾಲು ಕಾರ್ಯಕ್ರಮ ನಿರ್ವಹಿಸಿದರು.