ಗದಗ ಜಿಲ್ಲೆಯ ಶ್ರೀ ಶ್ರೀ ರಮೇಶ ಮಹಾಸ್ವಾಮಿಗಳು ಗೋವಿನಾಳ ಮಠ ಲಕ್ಷ್ಮೇಶ್ವರ ಇವರಿಗೆ ಕಾಸರಗೋಡು ಕನ್ನಡ ಭವನದಿಂದ ವಿಶೇಷ ಸನ್ಮಾನ -ಗೌರವಾರ್ಪಣೆ

ಕಾಸರಗೋಡು : ಕನ್ನಡ ಭವನದಿಂದ ಪ್ರಯೋಜಿತ ಕಾಸರಗೋಡು -ಕರ್ನಾಟಕ ಸಾಹಿತ್ಯ ಸಮ್ಮೇಳನ 2026.ಕಾರ್ಯಕ್ರಮ ಕ್ಕೆ ಸಾಹಿತ್ಯ ಆಶೀರ್ವಚನಕ್ಕೆ ವಿಶೇಷ ಆಹ್ವಾನಿತಾರಾಗಿ ಆಗಮಿಸಿದ ಶ್ರೀ ಶ್ರಿ ರಮೇಶ ಮಹಾಸ್ವಾಮಿಗಳು ಗೋವಿನಾಳ ಲಕ್ಷ್ಮೇಶ್ವರ ಇವರೀಗೆ ಗೌರವ ಆಥಿತ್ಯ ನೀಡಿ ಅನುಗ್ರಹ ಗಿಟ್ಟಿಸಿಕೊಂಡ ಕನ್ನಡ ಭವನ ಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್, ಎಡನೀರು ಶ್ರೀಗಳಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರ ನೇತೃತ್ವದಲ್ಲಿ ಫಲ ಪುಷ್ಪ ಉತ್ತರೀಯ, ಹಾರಾರ್ಪಣೆ, ಸ್ಮರಣಿಕೆ, ಹಾಗೂ ಗೌರವ ಫಲಕ ಗಳೊಂದಿಗೆ ಮನಮುಟ್ಟುವ ಗೌರವಾರ್ಪಣೆ ನೀಡಿ ಸನ್ಮಾನಿಸಿದರು.
ಕನ್ನಡ ಭವನದ ಆತಿತ್ಯ, ಹಿರಿಯರನ್ನು, ಕಿರಿಯರನ್ನು, ಸಾಹಿತಿಗಳನ್ನು, ಸನ್ಮಾನಿತರನ್ನು, ಗಣ್ಯರನ್ನು, ಹಾಗೂ ಕಾರ್ಯಕರ್ತರುಗಳನ್ನು ಒಂದೇ ಸಮಭಾವದಲ್ಲಿ ಸ್ವೀಕರಿಸುವ ಸಂಯಮ ಮತ್ತು ರೀತಿ ಅನುಕರಣೀಯವಾದದ್ದು. ಒಂದು ದಿನ ಪೂರ್ವದಿಂದ ಇಲ್ಲಿನ ಉಚಿತ ವಸತಿ ಸೌಕರ್ಯ, ವೀಕ್ಷಿಸಲೆಂದೇ ಮುನ್ನಾ ದಿನವೇ ಬಂದ ನಾನು ಇದರಿಂದ ಪ್ರಭಾವಿತನ್ನಾಗಿದ್ದೇನೆ.

ನಮ್ಮ ಶ್ರೀ ಮಠ ಗೋವಿನಾಳದಲ್ಲಿ ನಾನೀ ಪ್ರಕ್ರಿಯೆ, ಸಾಹಿತ್ಯ ಸೇವೆ, ಕನ್ನಡ, ಧಾರ್ಮಿಕ ಸೇವೆ ಯನ್ನು ಪ್ರಾಯೋಗಿಸುತ್ತೇನೆ. ವಾಮನ್ ರಾವ್ -ಸಂದ್ಯಾ ರಾಣಿ ದಂಪತಿಗಳನ್ನು ನಾವು ಗದಗಕ್ಕೆ ಕರೆಸಿಕೊಳ್ಳುತ್ತೇವೆ. ಅವರ ಈ ಕನ್ನಡ, ಹಾಗೂ ಸನಾತನ ಸಂಸ್ಕೃತಿಯ ಪುನಃರುತ್ತಾನ ಪ್ರಕ್ರಿಯೆಗೆ ನಮ್ಮ ಸಂಪೂರ್ಣ ಅನುಗ್ರಹ ಹಾಗೂ ಸಹಕಾರ ಇರುತ್ತದೆ ಎಂದು ಗೌರವಾರ್ಪಣೆ ಸ್ವೀಕರಿಸಿ ಶ್ರೀ ಶ್ರೀ ರಮೇಶ ಮಹಾಸ್ವಾಮಿಗಳು ನುಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!