ಮಂಗಳೂರು:ಅಬುದಾಬಿಯಲ್ಲಿ ಫೆಬ್ರವರಿ 4ರಿಂದ 15ರವರೆಗೆ ನಡೆದ ಅಂತರಾಷ್ಟ್ರೀಯ ಮಾಸ್ಟರ್ಸ್ ಗೇಮ್ಸ್ 2026ರಲ್ಲಿ ಮಂಗಳೂರು ಮೂಲದ ವಕೀಲ ಡಿ. ಪದ್ಮನಾಭ ಕುಮಾರ್ ಗಮನಾರ್ಹ ಸಾಧನೆ ಮಾಡಿ ಚಾಂಪಿಯನ್ನಾಗಿ ಹೊರಹೊಮ್ಮಿದ್ದು ಈ ಮೂಲಕ 8 ಬಾರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಆಗಿರುವುದಾಗಿ ಸ್ವತಃ ಅವರೇ ಹೇಳಿದರು .
ನಗರದ ಪತ್ರಿಕಾಭವನದಲ್ಲಿ ನಡೆಸಿಯಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಈ ಕ್ರೀಡಾಕೂಟದಲ್ಲಿ 25,000 ಕ್ರೀಡಾಪಟುಗಳು 125 ರಾಷ್ಟ್ರಗಳಿಂದ ಭಾಗವಹಿಸಿದ್ದರು. 27ಕ್ಕೂ ಹೆಚ್ಚು ಕ್ರೀಡೆಗಳು 38 ಸ್ಥಳಗಳಲ್ಲಿ ಆಯೋಜಿಸಲ್ಪಟ್ಟಿತ್ತು ಎಂದರು .
ನಾನು 100, 200, 400 ಮೀಟರ್ ಓಟ, 4×100 ಮತ್ತು 4×400 ಮೀಟರ್ ರಿಲೇ ಹಾಗೂ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ, 1 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಪದಕಗಳನ್ನು ಪಡೆದಿದ್ದೇನೆ . ಜೊತೆಗೆ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಮೂರನೇ ಬಾರಿ ಚಾಂಪಿಯನ್‌ಶಿಪ್ ಪಡೆದ್ದಿದೇನೆ . ಇದರ ಜೊತೆಗೆ ತಮ್ಮ ಹಿಂದಿನ ಕ್ರೀಡಾ ಸಾಧನೆಯನ್ನು ಹಂಚಿಕೊಂಡರು . ಮುಂದೆ 2027 ರಲ್ಲಿ ಜಪಾನ್ ನ ಕಾನ್‌ಸಾಯಿ ನಡೆಯಲಿರುವ ಅಂತರಾಷ್ಟ್ರೀಯ ಮಾಸ್ಟರ್ಸ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದೇನೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಕ್ರೀಡಾಪಟುವಿನ ಬೆಂಬಲಿಗರಾದ ಭಾಸ್ಕರ್ ರಾವ್ , ಆನಂದ್ , ಮೀನಾ ಟೆಲಿಸ್ ಸಹಿತ ಮುಂತಾದವರು ಉಪಸ್ಥಿತರಿದರು .