ಕಾಸರಗೋಡು: ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ಇರುವ “ಚುಟುಕು ಯುಗಾಚಾರ್ಯ ಎಂ.ಜಿ.ಆರ್. ಅರಸ್” ವೇದಿಕೆಯಲ್ಲಿ 22.02.2026 ರಂದು ನಡೆದ “ಕಾಸರಗೋಡು – ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026” ಕಾರ್ಯಕ್ರಮದಲ್ಲಿ ಡಾ. ವಾಮನ್ ರಾವ್ ಬೇಕಲ್ ಮತ್ತು ಸಂಧ್ಯಾ ರಾಣಿ ದಂಪತಿಗಳಿಗೆ “ಗಡಿನಾಡ ಆದರ್ಶ ಕನ್ನಡ ದಂಪತಿಗಳು” ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ನಾಡೋಜ ಡಾ. ಕೃಷ್ಣ ಪ್ರಸಾದ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಡಾ. ಕೊಲಚಪ್ಪೆ ಗೋವಿಂದ ಭಟ್ ಅವರ ಅಧ್ಯಕ್ಷತೆಯಲ್ಲಿರುವ ದಕ್ಷಿಣ ಕನ್ನಡ ಪರಿಷತ್ತು ಜಿಲ್ಲಾ ಘಟಕದ ವತಿಯಿಂದ ಈ ಗೌರವ ಪ್ರಶಸ್ತಿಯನ್ನು ಆದರಪೂರ್ವಕವಾಗಿ ನೀಡಲಾಯಿತು. ಡಾ. ವಾಮನ್ ರಾವ್ ಮತ್ತು ಸಂಧ್ಯಾ ರಾಣಿ ಅವರು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸ್ಥಾಪಕರಾಗಿದ್ದು, ಕನ್ನಡ ಭಾಷೆ ಹಾಗೂ ಸಾಹಿತ್ಯ ಸೇವೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.
ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಈಗಾಗಲೇ ಕರ್ನಾಟಕದ ದಕ್ಷಿಣ ಕನ್ನಡ, ಕೊಡಗು, ಕಾಸರಗೋಡು, ಉಡುಪಿ, ಕೋಲಾರ, ಬೆಂಗಳೂರು, ಗದಗ, ಚಿತ್ರದುರ್ಗ, ಹಾಸನ, ಕೊಪ್ಪಳ, ಬಾಗಲಕೋಟೆ, ವಿಜಯಪುರ ಸೇರಿದಂತೆ ಮುದ್ದೇಬಿಹಾಳ ತಾಲೂಕು ಮುಂತಾದ ಸುಮಾರು 15 ಜಿಲ್ಲೆಗಳಲ್ಲಿಗೆ ವ್ಯಾಪಿಸಿ ಕನ್ನಡ ಕೈಂಕರ್ಯವನ್ನು ಉತ್ಸಾಹದಿಂದ ನಡೆಸುತ್ತಿದೆ.
ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಶ್ರೀ ಶ್ರೀ ರಮೇಶ ಮಹಾಸ್ವಾಮಿಗಳು, ನಾಡೋಜ ಡಾ. ಕೃಷ್ಣ ಪ್ರಸಾದ್, ಡಾ. ಬಾಲಕೃಷ್ಣ ಎಸ್. ಮದ್ದೋಡಿ, ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಪ್ರದೀಪ್ ಬೇಕಲ್, ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಕ.ರ.ವೇ ರಾಜ್ಯ ಸಂಚಾಲಕ ನಂ. ವಿಜಯಕುಮಾರ್, ವಿಶಾಲಾಕ್ಷ ಪುತ್ರಕಳ, ವಿರಾಜ್ ಅಡೂರ್, ಜಯಾನಂದ ಪೆರಾಜೆ, ಡಾ. ಶಾಂತ ಪುತ್ತೂರು, ಡಾ. ಸುರೇಶ್ ನೆಗಳಗುಳಿ, ರಾಜೇಶ್ ಕೋಟೆಕಣಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.