10 ಲಕ್ಷ ವೆಚ್ಚದ ರಸ್ತೆ ಕಾಮಗಾರಿಯಲ್ಲಿ ಅಕ್ರಮ ಆರೋಪ

ಮಂಜೇಶ್ವರ: ಜಿಲ್ಲಾ ಪಂಚಾಯತ್ ವತಿಯಿಂದ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಟಾರ್ ಹಾಕಿ ನಿರ್ಮಿಸಿದ ಮುನ್ನಿಪಾಡಿ–ಮೀಯಪ್ಪದವು ರಸ್ತೆ ಕಾಮಗಾರಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಸುಮಾರು 300 ಮೀಟರ್ ಟಾರ್ ಕಾಮಗಾರಿಗೆ 10 ಲಕ್ಷ ರೂ. ಅಗತ್ಯವಿಲ್ಲ, ಆದರೆ ಕಾಮಗಾರಿಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಆಟೋ ರಿಕ್ಷಾ ಚಾಲಕರು ಮತ್ತು ಸ್ಥಳೀಯರು ಆರೋಪಿಸಿದ್ದಾರೆ.

ಈ ರಸ್ತೆ ವರ್ಕಾಡಿ ಹಾಗೂ ಮೀಂ ಗ್ರಾಮ ಪಂಚಾಯತ್ ಪ್ರದೇಶಗಳ ಮೂಲಕ ಹಾದು ಹೋಗಿ, ಕರ್ನಾಟಕವನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ಪ್ರಮುಖ ತೀರ್ಥಕ್ಷೇತ್ರವಾದ ಪೊಯ್ಯತ್ ಬಯಲ್ ಮಖಾಂ ಸೇರಿದಂತೆ ಹಲವು ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಟಾರ್ ಬದಲಾಗಿ ಕರಿ ಎಣ್ಣೆ (Black oil) ಬಳಸಿದ ಕಾರಣ, ಮೆಟಲ್ ಮಿಶ್ರಣ ಸಡಿಲವಾಗಿ ರಸ್ತೆ ಹಾಳಾಗಲು ಆರಂಭಿಸಿದೆ ಎಂಬ ಆರೋಪವೂ ಕೇಳಿಬಂದಿದೆ.ಕೇವಲ ರಸ್ತೆ ಟಾರ್ ಹಾಕಿದಂತೆ ತೋರಿಸಲು ಅಧಿಕಾರಿಗಳು ಪ್ರಯತ್ನಿಸಿದ್ದಾರೆ, ಇದು ಸಾರ್ವಜನಿಕರನ್ನು ಮೋಸಗೊಳಿಸುವ ಕ್ರಮ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಸ್ತೆ ನಿರ್ಮಾಣವಾದ ಮೂರು ದಿನಗಳಲ್ಲೇ ಹಾಳಾಗಿದೆ.

ಈ ಅಕ್ರಮದಲ್ಲಿ ಸಹಾಯಕ ಇಂಜಿನಿಯರ್ ಮತ್ತು ಗುತ್ತಿಗೆದಾರರ ಮಧ್ಯೆ ಸಾಂಠಗಾಂಠ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!