ಮಗ ಹಠ ಮಾಡಿ ಚೀನಾ ಹುಡುಗಿಯನ್ನ ಮದುವೆ ಮಾಡಿಕೊಂಡು ಬಂದ. ಸೊಸೆ ಮಾಡುವ ಹೊಸ ಹೊಸ ರುಚಿಯಾದ ಅಡುಗೆ ಊಟ ಮಾಡ್ತ ಮಾಡ್ತ, ಅತ್ತೆ ಮಾವನ ಅಸಮಾಧಾನ ಕಡಿಮೆ ಆಗಿ, ಎಲ್ಲರೂ ಖುಷಿಯಾಗಿದ್ದರು.
ಮನೆಯಲ್ಲಿ ಜಿರಳೆ, ನೊಣ ಎಲ್ಲ ಮಾಯವಾಗಿ “ಮನೆನ ಎಷ್ಟು ಸ್ವಚ್ಛವಾಗಿ ಇಟ್ಕೊಂಡಿದ್ದಾಳೆ ನಮ್ಮ ಸೊಸೆ ” ಅಂತ ಎಲ್ಲರಿಗೂ ಹೇಳಿ ಅತ್ತೆ ಮಾವನಿಗೆ ಖುಷಿಯೋ ಖುಷಿ….!!
ಕಳ್ಳ ಬೆಕ್ಕು ಹಾಲು ಕುಡಿಯಲು ಬರುವುದು ಬಂದ್ ಆಯ್ತು. ಎಲ್ಲಾ ನಮ್ ಸೊಸೆ ಕಾಲ್ಗುಣ..!
ಅವತ್ತು ಊಟ ಬಹಳ ರುಚಿಯಾಗಿತ್ತು. ಉಳಿದದ್ದು ಹಿತ್ಲಲ್ಲಿ ಹಾಕಿ ಅತ್ತೆ ನಾಯಿನ ಕರೆದೂ ಕರೆದಳು . ನಾಯಿ ಬರಲಿಲ್ಲ ಅದೆಲ್ಲಿ ಹಾಳಾಗಿಹೋಯ್ತೋ….?! 😁😁😂😂😂
❣️ಸ್ನೇಹಜೀವಿ❣️
✍️ಬರಹ:- ಉದಯಮಲ್ಲಿ, ಅಮ್ಮ್ಚಿ ಕೆರೆ, ಬೆದ್ರಡ್ಕ, ಸಿರಿಬಾಗಿಲು, ಕಾಸರಗೋಡು