ಸಂಸ್ಕಾರದ ಮೂಲ ತಾಯಿ :- ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ
ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ದೇವಸ್ಥಾನದ ಆಶ್ರಯದಲ್ಲಿ ಯಕ್ಷ ಸ್ನೇಹ ಕಲಾಪ್ರತಿಷ್ಠಾನ((ರಿ) ಕೊಂಚಾಡಿ
ಇವರು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿರುವ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ ಯಕ್ಷಮಂಜರಿ ಯ ಅಷ್ಟಮ ದಿನದ ಸಮಾರೋಪ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದ ಶ್ರೀ ದತ್ತಾಂಜನೇಯ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಯವರು ಪಾಶ್ಯಾತ್ಯ ದೇಶಗಳಲ್ಲಿ ವರ್ಷದಲ್ಲಿ ಒಂದು ದಿನ ಮಹಿಳಾ ದಿನಾಚರಣೆ ನಡೆಸಿದರೆ ಮಾತೃ ಪ್ರಧಾನವಾದ ನಮ್ಮ ದೇಶದಲ್ಲಿ ಸ್ತ್ರೀಯನ್ನು ದೇವತಾ ಭಾವನೆಯಿಂದ ಪ್ರತಿನಿತ್ಯ ಪೂಜಿಸುತ್ತೇವೆ. ನಮ್ಮ ಸಂಸ್ಕಾರದ ಮೂಲವೇ ತಾಯಿ. ಒಂದು ದೇಶದ ಆಧಾರಸಂಭವೇ ತಾಯಿ ಎಂದು ಹೇಳುತ್ತಾ ಸಂಸ್ಕಾರಯುತ ಜೀವನ ನಡೆಸುತ್ತಾ ಸಮಾಜಮುಖಿ ಸೇವೆಯನ್ನು ಮಾಡುತ್ತಾ ಜೀವನ ಸಾರ್ಥಕ್ಯಗೊಳಿಸೋಣ ಎಂದರು.
ಕಲಾಪೋಷಕರೂ ಸಾಮಾಜಿಕ ಕಾರ್ಯಕರ್ತರಾದ ಲ | ಆಶಾಪ್ರಭಾಕರ ರಾವ್ ಆರೂರು ಅಧ್ಯಕ್ಷತೆ ವಹಿಸಿದ್ದರು. ಎಂದರು. ನಾಗಕನ್ನಿಕಾ ದೇವಸ್ಥಾನದ ಮೊಕ್ತೇಸರರಾದ ಶ್ರೀ ರಮಾನಂದ ಭಂಡಾರಿ ಶುಭಾಶಯದ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಪೂರ್ಣಿಮ ಯತೀಶ್ ರೈ, ಹಿರಿಯ ಕಲಾವಿದರಾದ ಶ್ರೀಮತಿ ಪ್ರಫುಲ್ಲಾ ನಾಯಕ್ ಮಾಜಿ ಕಾರ್ಪೋರೇಟರ್ ಶ್ರೀಮತಿ ರಂಜಿನಿ ಲೋಕೇಶ್ ಕೋಟ್ಯಾನ್ ಉಪಸ್ಥಿತರಿದ್ದರು.ಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಶ್ರೀಮತಿ ಯೋಗಾಕ್ಷಿ ಗಣೀಶ್ ತಳಕಲ ಹಾಗೂ ಭರತನಾಟ್ಯ ಕ್ಷೇತ್ರದ ಸಾಧನೆಗಾಗಿ ಡಾII ಸೌಮ್ಯ ಸುಧೀಂದ್ರ ರಾವ್ ಇವರಿಗೆ ಗೌರವ ಸನ್ಮಾನ ಮಾಡಲಾಯಿತು.
ಹಿರಿಯ ಕಲಾವಿದ ರವಿ ಅಲೆವೂರಾಯ, ನಾಗಕನ್ನಿಕಾ ದೇವಸ್ಥಾನದ ಮೊಕ್ತೇಸರಾದ ಬಾಲಕೃಷ್ಣ ಕೊಟ್ಟಾರಿ, ಕಾವಿ ಸುಬ್ರಮಣ್ಯ ದೇವಸ್ಥಾನದ, ಪ್ರಭಾಕರ ರೈ, ಪೂರ್ಣಿಮಾ ಪ್ರಭಾಕರ ರಾವ ಪೇಜಾವರ, ಆನಂದ ಶೆಟ್ಟಿ ಸದಾನಂದ ದೇವಾಡಿಗ, ಪುರುಷೇತ್ತಮ ಪೂಜಾರಿ, ನಾಗೇಶ ಕೋಟ್ಯಾನ್, ಯಕ್ಷ ಸ್ನೇಹ ಕಲಾಪ್ರತಿಷ್ಠಾನದ ಗೌರವಾಧ್ಯಕ್ಷರಾದ ಮಧುಸೂದನ ಅಲೆವೂರಾಯ ಆಧ್ಯಕ್ಷೆ ಗೀತಾಲಕ್ಷ್ಮೀಶ, ಪ್ರತಿಷ್ಠಾನದ ಪದಾಧಿಕಾರಿಗಳಾದ ಮೋಹಿನಿ ಗೋಪಾಲ, ಅವನೀಶ ಭಟ್, ಶಿವಪ್ರಸಾದ್ ಕೊಕ್ಕಡ, ಹರೀಶ ಪಾಟಾಳಿ, ಅರುಣ್ ಕುಮಾರ್, ಗಣೇಶ ಬಿ.ಜಿ., ಯೋಗೀಶ ದೇವಾಡಿಗ, ಸೀಮಾ ಅರುಣ್, ಪ್ರಜ್ಞಾ ವಸಂತ, ಅನುರಾಧ ಯೋಗೀಶ, ಆಧ್ಯಾ, ಲಕ್ಷ್ಯಾ, ಕೃತಿ, ಹೃತ್ವಿ, ಲಕ್ಷಾ, ವೃಷಭೇಂದ್ರ, ಲವಿನಾ ಹಾಗೂ ನೂರಾರು ಕಲಾಭಿಮಾನಿಗಳು ಉಪಸ್ಥಿತರಿದ್ದರು. ನಂತರ ಯಕ್ಷ ಸ್ನೇಹ ಕಲಾ ಪ್ರತಿಷ್ಠಾನದ ಮಹಿಳಾ ಕಲಾವಿದರಿಂದ ಗಿರಿಜಾ ಕಲ್ಯಾಣ ತಾಳಮದ್ದಲೆ ಕಾರ್ಯಕ್ರಮ ನಡೆಯಿತು.