ನೀವು ಇತಿಹಾಸಗಾರರೇ ? ಸಂಶೋದಕರೇ ? ಕಮಲ್ ಗೆ ಪ್ರಶ್ನೆ ಹಾಕಿದ ಹೈಕೋರ್ಟ್
ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣರಾದ ಚಿತ್ರನಟ ಕಮಲ್ ಹಾಸನ್ ಗೆ ಕರ್ನಾಟಕ ಉಚ್ಚ ನ್ಯಾಯಾಲಯ ಸರಿಯಾದ ಚಾಟಿ ಬೀಸಿದೆ.
ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಕನ್ನಡ ಪರ ಸಂಘಟನೆಗಳ ಸಹಿತ ಕೋಟ್ಯಂತರ ಕನ್ನಡಿಗರು ಬಹಿರಂಗ ಕ್ಷಮೆ ಕೇಳಲು ಕಮಲ್ ಗೆ ಹೇಳಿದರೂ ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ನಾನೇ ಹೇಳಿದ್ದೆ ಸರಿ ಎಂದು ತನ್ನ ವಾದವನ್ನು ಸಮರ್ಥಿಸಿದ್ದರು .
ಇದರಿಂದ ಮತ್ತಷ್ಟು ಆಕ್ರೋಶಗೊಂಡ ಕನ್ನಡಿಗರು ಕಮಲ್ ಹಾಸನ್ ರ ‘ಥಕ್ ಲೈಫ್ ‘ ಸಿನೆಮಾದ ಬಿಡುಗೋಡೆಗೆ ಮತ್ತು ಪ್ರದರ್ಶನಕ್ಕೆ ಕನ್ನಡಿಗರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು .
ಇದರಿಂದಾಗಿ ಸಿನೆಮಾ ಬಿಡುಗೋಡೆ ಹಂಚಿಕೆಯ ಅವಕಾಶ ನೀಡುವ ಮತ್ತು ಭದ್ರತೆ ನೀಡಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ‘ರಾಜ್ ಕಮಲ್ ಫಿಲಂಸ್’ ಸಂಸ್ಥೆ ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿತ್ತು.ಈ ಅರ್ಜಿಯನ್ನು ಪರಿಗಣಿಸಿದ ರಾಜ್ಯ ಹೈಕೋರ್ಟ್ ಇದೊಂದು ಕ್ಷಮೆ ಯಾಚನೆ ಯಿಂದ ಮುಗಿಯುವ ವಿಷಯವಾಗಿದ್ದು ಕ್ಷಮೆ ಕೇಳುವುದರಲ್ಲಿ ಏನಿದೆ? ಎಂದು ಪ್ರಶ್ನಿಸಿದೆ.
ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಎಂ ನಾಗ ಪ್ರಸನ್ನ ಕಮಲ್ ಹಾಸನ್ ಹೇಳಿಕೆ ಕನ್ನಡಿಗರ ಭಾವನೆಗೆ ನೋವು ತರುವಂತದ್ದು .ಯಾವುದೇ ಭಾಷೆ ಜನರ ಭಾವನಾತ್ಮಕವಾದ ಹಾಗೂ ಸಾಂಸ್ಕೃತಿಕವಾದ ಗುರುತುಗಳು ಮತ್ತು ಆಧಾರವಾಗಿದೆ.ಒಂದು ನಾಡಿನ ಜನಾಂಗೀಯ ಭಾಷೆಯನ್ನು ಮತ್ತೊಂದು ಭಾಷೆಗೆ ಹೋಲಿಸುವುದು , ಕುಗ್ಗಿಸುವುದು , ಅಪಮಾನ ಮಾಡುವ ಹಕ್ಕು ಯಾರಿಗೂ ಇಲ್ಲ . ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿದೆ ಎನ್ನಲು ನೀವೇನು ಭಾಷಾ ಸಂಶೋಧಕರೇ ಅಥವಾ ಇತಿಹಾಸಗಾರರೇ ಎಂದು ನ್ಯಾಯಪೀಠ ಕಮಲ್ ಹಾಸನ್ ಗೆ ಪ್ರಶ್ನಿಸಿದೆ.ಯಾವುದೇ ಒಂದು ಭಾಷೆ ಮತ್ತೊಂದು ಭಾಷೆಯಿಂದ ಹುಟ್ಟುವುದಿಲ್ಲ . ಈ ರೀತಿಯ ಹೇಳಿಕೆ ಸರಿಯಲ್ಲ ಎಂದು ಕಮಲ್ ಹಾಸನ್ ಹೇಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು .