ಅಹ್ಲೆ ಹದೀಸ್ ಸಮ್ಮೇಳನ ಎ.18–19ರಂದು ಮಂಗಳೂರಿನಲ್ಲಿ

ಜಮೀಯತೇ ಅಹ್ಲೆ ಹದೀಸ್ ದ.ಕ. ಜಿಲ್ಲಾ ಸಮಿತಿ ವತಿಯಿಂದ ನಗರದ ಪುರಭವನದಲ್ಲಿ ಎ. 18 ಮತ್ತು 19ರಂದು ಅಹ್ಲೆ ಹದೀಸ್ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಲಾಂ ಕಾಟಿಪಳ್ಳ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಎ.18ರಂದು ಬೆಳಗ್ಗೆ 10 ಗಂಟೆಗೆ ಸಮ್ಮೇಳನ ಉದ್ಘಾಟನೆ ನಡೆಯಲಿದೆ ಎಂದರು.

ಅಖಿಲ ಭಾರತ ಜಮೀಯತೇ ಅಹ್ಲೆ ಹದೀಸ್ ಅಧ್ಯಕ್ಷ ಅಸ್ಗರ್ ಅಲಿ ಇನಾಮ್ ಮೆಹ್ಡಿ ಮಾರ್ಗದರ್ಶನದಲ್ಲಿ, ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್‌ ವಹಾಬ್ ಜಾಮಈ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ ಎಂದರು .

ಕರ್ನಾಟಕ ರಾಜ್ಯ ಜಮೀಅತೆ ಅಹ್ಲೆ ಹದೀಸ್ನ ಪ್ರಧಾನ ಕಾರ್ಯದರ್ಶಿ ಅಸ್ಲಮ್ ಖಾನ್ ಮತ್ತು ಕೋಶಾಧಿಕಾರಿ ಕೆ.ಜೆ. ಮನ್ಸೂರ್ ಅಹ್ಮದ್ ಖುರೇಶಿ ಮುಖ್ಯ ಅತಿಥಿಗಳಾಗಿ ಭಾಗಹಿಸಲಿದ್ದಾರೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ನಜ್ಜುದ್ದೀನ್ ಅಸದಿ, ಕೋಶಾಧಿಕಾರಿ ಮುಹಮ್ಮದ್ ನದೀಂ, ಮುಖ್ಯ ಸಲಹೆಗಾರ ಅಬ್ದುಸ್ಸಲಾಂ ಮದನಿ ಸಹಿತ ಮುಂತಾದವರು .

SHARE
Loading spinner

Leave a Reply

Your email address will not be published. Required fields are marked *

error: Content is protected !!