​ಪಿರಾರ ಮೂಲೆ: ಅಬೂಬಕ್ಕರ್ ಸಿದ್ದೀಖ್ ಮಸೀದಿ ಹಾಗೂ ನೂರುಲ್ ಹುದಾ ಮದ್ರಸ ಸಹಯೋಗದಲ್ಲಿ ಅದ್ದೂರಿ ಇಫ್ತಾರ್ ಸಂಗಮ

​ಮಂಜೇಶ್ವರ: ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ಸಾರುವ ನಿಟ್ಟಿನಲ್ಲಿ, ಪಿರಾರ ಮೂಲೆಯ ಅಬೂಬಕ್ಕರ್ ಸಿದ್ದೀಖ್ ಜುಮಾ ಮಸೀದಿ ಹಾಗೂ ನೂರುಲ್ ಹುದಾ ಮದ್ರಸ ಗೌಸಿಯಾ ನಗರ ಇವುಗಳ ಜಂಟಿ ಆಶ್ರಯದಲ್ಲಿ ಸಾರ್ವಜನಿಕ ‘ಗ್ರ್ಯಾಂಡ್ ಇಪ್ತಾರ್ ಸಂಗಮ’ ಅತ್ಯಂತ ಯಶಸ್ವಿಯಾಗಿ ನಡೆಯಿತು.

​ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಜೇಶ್ವರ ಶಾಸಕ ಎ. ಕೆ. ಎಂ. ಅಶ್ರಫ್ ಅವರು ಮಾತನಾಡಿ, “ರಂಜಾನ್ ಮಾಸವು ತ್ಯಾಗ ಮತ್ತು ಸಮಾನತೆಯ ಸಂಕೇತವಾಗಿದೆ. ಇಂತಹ ಇಫ್ತಾರ್ ಕೂಟಗಳು ಸಮಾಜದಲ್ಲಿ ಪರಸ್ಪರ ಪ್ರೀತಿ ಮತ್ತು ವಿಶ್ವಾಸವನ್ನು ಗಟ್ಟಿಗೊಳಿಸುತ್ತವೆ,” ಎಂದು ಹಾರೈಸಿದರು.

​ಮಂಜೇಶ್ವರ ಪಂಚಾಯತ್ ಅಧ್ಯಕ್ಷರಾದ ಬಶೀರ್ ಕನಿಲ ಅವರು ಕಾರ್ಯಕ್ರಮಕ್ಕೆ ಶುಭ ಕೋರಿ, ಸ್ಥಳೀಯ ಧಾರ್ಮಿಕ ಕೇಂದ್ರಗಳು ನಡೆಸುತ್ತಿರುವ ಇಂತಹ ಸಾಮಾಜಿಕ ಕಾರ್ಯಗಳು ಶ್ಲಾಘನೀಯ ಎಂದರು.

​ಈ ಭವ್ಯ ಸಂಗಮದ ಯಶಸ್ವಿಗಾಗಿ ಪ್ರಮುಖರಾದ ಮೊಹಮ್ಮದ್ ಸಿದ್ದೀಖ್, ಪಳ್ಳಿ ಕುಂಞ್ಞ ಹಾಜಿ, ಮೆಹಮೂದ್ ಹಾಜಿ, ಝೈನುದ್ದೀನ್ ಹಾಜಿ, ಮುಸ್ತಾಕ್, ಸಾದಿಖ್ ಹಾಗೂ ಕಲೀಲ್ ಅವರು ಮುಂಚೂಣಿಯಲ್ಲಿದ್ದು ನೇತೃತ್ವ ನೀಡಿದರು.

​ಸ್ಥಳೀಯ ನೂರಾರು ಸಾರ್ವಜನಿಕರು, ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು ಈ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ರಂಗನ್ನು ಹೆಚ್ಚಿಸಿದರು. ಕೊನೆಯಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!