ಮಾ.15ರಂದು ಪುತ್ತೂರಿನಲ್ಲಿ ಜಿಲ್ಲಾ ಶೈಕ್ಷಣಿಕ ಸಮಾವೇಶ, ಪದಗ್ರಹಣ ಹಾಗೂ ಪ್ರಶಸ್ತಿ ಪ್ರದಾನ

ಮಂಗಳೂರು: ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಪುತ್ತೂರು ಮತ್ತು ಕಡಬ ತಾಲೂಕು ಘಟಕಗಳ ಆಶ್ರಯದಲ್ಲಿ ಜಿಲ್ಲೆಯ ಶಿಕ್ಷಣ ಇಲಾಖೆಯ ನೌಕರರ ಜಿಲ್ಲಾ ಶೈಕ್ಷಣಿಕ ಸಮಾವೇಶ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 15ರಂದು ಪುತ್ತೂರಿನ ಬಂಟರ ಭವನದಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಪ್ರೇಮನಾಥ ಶೆಟ್ಟಿ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯಕ್ ಡಾ. ವೈ. ಭರತ್ ಶೆಟ್ಟಿ, ಹರೀಶ್ ಪೂಂಜ, ಉಮಾನಾಥ ಎ. ಕೋಟ್ಯಾನ್, ಭಗೀರಥಿ ಮುರುಳ್ಯ, ಹಾಗೂ ವಿಧಾನಪರಿಷತ್ ಸದಸ್ಯರಾದ ಕಿಶೋರ್ ಬಿ.ಆರ್. ಮತ್ತು ದಯಾನಂದ ಸರ್ಜಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲೆಯ ಬೋಧಕರ ಹಾಗೂ ಬೋಧಕೇತರ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ **“ವಿದ್ಯಾರತ್ನ ಪ್ರಶಸ್ತಿ”, “ಸೇವಾಭೂಷಣ ಪ್ರಶಸ್ತಿ”, “ಶೈಕ್ಷಣಿಕ ಸೇವಾ ಸಾಧಕ ಪ್ರಶಸ್ತಿ” ಹಾಗೂ “ಶಿಕ್ಷಣ ರತ್ನ ಪ್ರಶಸ್ತಿ”**ಗಳನ್ನು ಪ್ರದಾನಿಸಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು. ವಿದ್ಯಾರತ್ನ ಪ್ರಶಸ್ತಿಗೆ ಮೂಡಬಿದ್ರೆಯ ಶಿವಾನಂದ ಕಾಯ್ಕಿಣಿ, ಪುತ್ತೂರಿನ ವಿಷ್ಣುಪ್ರಸಾದ್, ಬೆಳ್ತಂಗಡಿಯ ಉಮಾ ಎಸ್., ಮಂಗಳೂರಿನ ಉಮೇಶ್ ಕೆ.ಆರ್., ಮಂಗಳೂರು ದಕ್ಷಿಣದ ವಾಸು ಕೆ. ಹಾಗೂ ಫ್ರಾನ್ಸಿಸ್ ಲ್ಯಾನ್ಸಿ ಮಿನೇಜಸ್ ಅವರನ್ನು ಆಯ್ಕೆ ಮಾಡಲಾಗಿದೆ.

ಸೇವಾಭೂಷಣ ಪ್ರಶಸ್ತಿಗೆ ಮಂಗಳೂರಿನ ಬಾಲು ಡಿ.ಎಂ., ಪುತ್ತೂರಿನ ರೇಗಪ್ಪ ಎಂ., ಮಂಗಳೂರು ದಕ್ಷಿಣದ ನಾಗವೇಣಿ ಜೋಗಿ, ಮೂಡಬಿದ್ರೆಯ ಶ್ರೀರಂಗ ಮಯ್ಯ, ಬಂಟ್ವಾಳದ ಶ್ರೀಧರ್, ಸುಳ್ಯದ ಶಿವಪ್ರಸಾದ್ ಕೆ.ವಿ. ಹಾಗೂ ಬೆಳ್ತಂಗಡಿಯ ವಾರಿಜ ಬಿ. ಆಯ್ಕೆಯಾಗಿದ್ದಾರೆ.

ಪುತ್ತೂರು ತಾಲೂಕಿನ ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಮುಖ್ಯಸ್ಥರಾದ ಡಾ. ಕೃಷ್ಣ ಭಟ್ ಕೊಂಕೋಡಿ, ರೆ. ವಿಜಯ ಹಾರ್ವಿನ್, ಕೆ. ಸೀತಾರಾಮ ರೈ ಸವಣೂರು, ಜಯರಾಮ ಕೆದಿಲಾಯ ಶಿಬರ, ರೆ. ಫಾ. ಸಕರಿಯಾಸ್ ನಂದಿಯಾಟ್, ಸೇಸಪ್ಪ ರೈ ರಾಮಕುಂಜ, ಭಗಿನಿ ಪ್ರಶಾಂತಿ ಬಿ.ಎಸ್., ಅಬ್ದುಲ್ ಅಜೀಜ್, ಹೇಮಾನಾಥ ಶೆಟ್ಟಿ ಕಾವು, ರೆ. ಫಾ. ಬಿಜು ಕೆ.ಜೆ., ಜಯಸೂರ್ಯ ರೈ ಮಾದೋಡಿ, ರೆ. ಫಾ. ಪೌಲ್ ಪ್ರಕಾಶ್, ವೆಂಕಟರಮಣ ರಾವ್ ಮಂಕುಡೆ, ರೆ. ಫಾ. ಜಿಸ್ಕೋನ್ ಜೋಸ್, ಅವಿನಾಶ್ ಕೊಡಂಕೇರಿ ಹಾಗೂ ಬಶೀರ್ ಪುತ್ತೂರು ಅವರಿಗೆ “ಶೈಕ್ಷಣಿಕ ಸೇವಾ ಸಾಧಕ ಪ್ರಶಸ್ತಿ” ನೀಡಲಾಗುವುದು.

ಇದಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ವಸಂತ ಮೂಲ್ಯ, ಪ್ರಮೀಳಾ ಕ್ರಾಸ್ತಾ, ಸುಬ್ರಮಣ್ಯ ಎಂ., ರಘು ಬಿ.ಆರ್., ಶಾಂತಪ್ಪ ಗೌಡ, ಪ್ರವೀಣಾ ರೈ, ರಮೇಶ್ ಮಯ್ಯ, ಸತೀಶ್, ಚಂದ್ರಶೇಖರ ಹಾಗೂ ರಾಕೇಶ್ ಅವರಿಗೆ “ಶಿಕ್ಷಣ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಗುವುದು. ಈ ಕಾರ್ಯಕ್ರಮದ ಅಂಗವಾಗಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವೂ ನಡೆಯಲಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ತ್ಯಾಗಂ ಹರೇಕಳ, ರಾಜ್ಯ ಸಂಘಟನಾ ಕಾರ್ಯದರ್ಶಿ ಶೆರ್ಲಿ ಸುಮಾಲಿನಿ, ಜಿಲ್ಲಾ ಉಪಾಧ್ಯಕ್ಷ ಕೆಎಂಕೆ ಮಂಜನಾಡಿ, ಜಿಲ್ಲಾ ನಿರ್ದೇಶಕ ಅಂಬರೀಷ್ ಲಮಾಣಿ ಹಾಗೂ ಜಿಲ್ಲಾ ಕಾರ್ಯದರ್ಶಿ ಪ್ರತೀಪ್ ಎ.ಆರ್. ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!