ಗುರುಪುರ: ಕೆಂಪು ಬಾಕ್ಸೈಟ್ ತುಂಬಿಕೊಂಡು ಬರುತ್ತಿದ್ದ ಲಾರಿ ಗುರುಪುರ ಜಂಕ್ಷನ್‌ನಲ್ಲಿ ನಿಯಂತ್ರಣ ತಪ್ಪಿ ಅಂಗಡಿಗಳಿಗೆ ಗುದ್ದಿದ ಘಟನೆ ಇಂದು ಸಂಭವಿಸಿದೆ.
ಲಾರಿ ನಿಯಂತ್ರಣ ತಪ್ಪಿ ಜಂಕ್ಷನ್ ಬಳಿ ಇರುವ ಮಿನಿ ಬಜಾರ್ ಬೇಕರಿ ಹಾಗೂ ಸಮೀಪದ ಮೊಬೈಲ್ ಅಂಗಡಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಅಂಗಡಿಗಳ ಮುಂಭಾಗಕ್ಕೆ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ವೇಳೆ ಅಂಗಡಿಗಳಲ್ಲಿ ಹೆಚ್ಚಿನ ಜನಸಂದಣಿ ಇರದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸಹಕರಿಸಿದರು.