ಡಿ. 29ರಂದು ಬೇಕಲ್ ಫೆಸ್ಟ್ ವೇಳೆ ರೈಲು ಬಡಿದು ಮಗ ಮೃತಪಟ್ಟ ಖಿನ್ನತೆಯಿಂದ ಸಾವಿಗೆ ಶರಣಾದ ದಂಪತಿ

ಕಾಸರಗೋಡು: ಬೇಕಲ ಬೀಚ್ ಫೆಸ್ಟ್ ವೇಳೆ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಇಂಜಿನಿಯರಿಂಗ್ ವಿದ್ಯಾರ್ಥಿಯ ತಂದೆ, ತಾಯಿ ಮನೆಯೊಳಗೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಯಿನಾಚಿಪರಂಬ್‌ನ ವೇಣುಗೋಪಾಲನ್ ನಾಯರ್ (55), ಪತ್ನಿ ಸ್ಮಿತಾ (45) ಎಂಬಿವರು ಮೃತಪಟ್ಟವರಾಗಿದ್ದಾರೆ. ನಿನ್ನೆ ಬೆಳಿಗ್ಗೆ ಮನೆಯ ಸೆಂಟ್ರಲ್ ಹಾಲ್‌ನಲ್ಲಿ ಮೃತದೇಹಗಳು ಕಂಡು ಬಂದಿವೆ.

ವಿಷಯ ತಿಳಿದು ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ಆರಂಭಿಸಿದ್ದಾರೆ. ವೇಣುಗೋಪಾಲನ್ ನಾಯರ್- ಸ್ಮಿತಾ ದಂಪತಿಯ ಏಕೈಕ ಪುತ್ರನೂ, ಮಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಎಂ. ಶಿವನಂದನ್ (19) ಡಿಸೆಂಬರ್ 29ರಂದು ರಾತ್ರಿ ಬೇಕಲದಲ್ಲಿ ರೈಲು ಢಿಕ್ಕಿ ಹೊಡೆದು ಮೃತಪಟ್ಟಿದ್ದರು. ಅಂದು ರಾತ್ರಿ ಬೇಕಲ್ ಬೀಚ್ ಫೆಸ್ಟ್‌ನಂಗವಾಗಿ ವೇಡನ್‌ರ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ತಲುಪಿದ್ದ ವೇಳೆ ಶಿವನಂದನ್‌ರಿಗೆ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಸಂಭವಿಸಿತ್ತು.

SHARE
Loading spinner

Leave a Reply

Your email address will not be published. Required fields are marked *

error: Content is protected !!