ಬೆಂಗಳೂರು : ತುಳು ಚಿತ್ರ ‘ಕಟ್ಟೆಮಾರ್’ 50 ದಿನಗಳ ಸಂಭ್ರಮ: ಹಾಗೂ ಕನ್ನಡದಲ್ಲಿ ಬಿಡುಗಡೆಗೊಳ್ಳಲಿರುವ ಕಟ್ಟೆಮಾರ್ ಚಿತ್ರದ ಸೆಲೆಬ್ರೆಟಿ ಶೋ

ತುಳು ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಂಡ “ಕಟ್ಟೆಮಾರ್” ಚಿತ್ರದ 50 ದಿನಗಳ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಚಿತ್ರದ ನಿರ್ಮಾಪಕರು ಲಂಚುಲಾಲ್ ಕೆ .ಎಸ್ ,ಕನ್ನಡ ಚಲನಚಿತ್ರದ ಖ್ಯಾತ ಹಿರಿಯ ನಟ ಸುಂದರ್ ರಾಜ್, ಪ್ರಮೀಳಾ ಜೋಶಿ, ಕನ್ನಡ ನಟಿ ತಾರಾ, ವಾಣಿಶ್ರೀ ಸೇರಿದಂತೆ ಹಲವು ಕಲಾವಿದರು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಚಿತ್ರತಂಡದ ಸದಸ್ಯರು, ಕಲಾವಿದರು ಹಾಗೂ ಅಭಿಮಾನಿಗಳು ಸೇರಿಕೊಂಡು ಬೆಂಗಳೂರಿನಲ್ಲಿ ಕೇಕ್ ಕತ್ತರಿಸಿ ಈ ಯಶಸ್ಸನ್ನು ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಚಿತ್ರತಂಡದ ಪ್ರಮುಖರು ಭಾಗವಹಿಸಿ, ಪ್ರೇಕ್ಷಕರ ಬೆಂಬಲವೇ ಚಿತ್ರದ ಯಶಸ್ಸಿಗೆ ಮುಖ್ಯ ಕಾರಣ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದ ವೇಳೆ ಕಲಾವಿದರು ಮತ್ತು ನಿರ್ಮಾಪಕರು ಪರಸ್ಪರ ಕೇಕ್ ತಿನಿಸಿಕೊಳ್ಳುವ ಮೂಲಕ ಸಂತೋಷ ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೂ ಹಾಜರಿದ್ದು, ಚಿತ್ರದ ಯಶಸ್ಸಿನ ಕುರಿತು ಕಲಾವಿದರಿಂದ ಅಭಿಪ್ರಾಯಗಳನ್ನು ಕೇಳಿದರು.

ತುಳುನಾಡಿನ ಸಂಸ್ಕೃತಿ ಮತ್ತು ಕಥಾಹಂದರವನ್ನು ಒಳಗೊಂಡಿರುವ “ಕಟ್ಟೆಮಾರ್” ಸಿನಿಮಾ ಬಿಡುಗಡೆಯಾದ ಬಳಿಕ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಇಂದಿಗೆ 50 ದಿನಗಳ ಯಶಸ್ವಿ ಪ್ರದರ್ಶನ ಪೂರೈಸಿದೆ.

ಚಿತ್ರಕ್ಕೆತುಳುನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ, ಇದೀಗ ಅದನ್ನು ಕನ್ನಡ ಭಾಷೆಯಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಚಿತ್ರದ ಯಶಸ್ಸಿಗೆ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ ಚಿತ್ರತಂಡ, ಮುಂದೆಯೂ ಉತ್ತಮ ಚಿತ್ರಗಳನ್ನು ನೀಡುವ ಭರವಸೆ ವ್ಯಕ್ತಪಡಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!