KGF ಬಳಿಕ ಯಶ್ ಹೊಸ ಅವತಾರ: ‘Toxic’ ಸಿನಿಮಾ ಬಗ್ಗೆ ಭಾರೀ ಕುತೂಹಲ

KGF ಚಿತ್ರದ ಭಾರೀ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಸಾಕಷ್ಟು ದಿನಗಳಿಂದ ಮೂಡಿತ್ತು. ಆ ಕುತೂಹಲಕ್ಕೆ ಈಗ ಅಂತ್ಯ ಸಿಕ್ಕಿದೆ.

ಹೌದು… ಯಶ್ ಅವರ ಮುಂದಿನ ಬಹು ನಿರೀಕ್ಷಿತ ಸಿನಿಮಾ “Toxic – A Fairy Tale for Grown-Ups”.

ಹಾಲಿವುಡ್ ಮಟ್ಟದ ಆಕ್ಷನ್, ಭಾರೀ ಸ್ಟಾರ್ ಕಾಸ್ಟ್ ಮತ್ತು ಕೋಟ್ಯಂತರ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಈಗಾಗಲೇ ದೇಶದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಆದರೆ ಸಿನಿಮಾದ ಕಥೆ ಮತ್ತು ಪಾತ್ರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸದೆ ಚಿತ್ರತಂಡ ಇನ್ನಷ್ಟು ಕುತೂಹಲ ಮೂಡಿಸಿದೆ.

ಈ ಚಿತ್ರವನ್ನು ಖ್ಯಾತ ನಿರ್ದೇಶಕಿ ಗೀತು ಮೋಹನದಾಸ್ ನಿರ್ದೇಶಿಸುತ್ತಿದ್ದು, ಆಕ್ಷನ್, ಗ್ಯಾಂಗ್‌ಸ್ಟರ್ ಮತ್ತು ಡಾರ್ಕ್ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿಬರುತ್ತಿದೆ ಎನ್ನಲಾಗಿದೆ.

KGF ಬಳಿಕ ಯಶ್ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಯಶ್ ಸಂಪೂರ್ಣ ವಿಭಿನ್ನ ಲುಕ್ ಮತ್ತು ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಸಿನಿಮಾದ ಕಥೆ ಡ್ರಗ್ ಮಾಫಿಯಾ ಮತ್ತು ಅಂಡರ್‌ವರ್ಡ್ ಜಗತ್ತಿನ ಸುತ್ತ ಸಾಗುತ್ತದೆ ಎಂದು ಹೇಳಲಾಗುತ್ತಿದೆ.
ಗೋವಾ ಹಿನ್ನೆಲೆಯಲ್ಲಿರುವ ಈ ಕಥೆಯಲ್ಲಿ ಶಕ್ತಿ, ಹಣ, ಪ್ರೀತಿ ಮತ್ತು ದ್ರೋಹದ ನಡುವಿನ ಸಂಘರ್ಷವನ್ನು ತೋರಿಸಲಾಗುತ್ತದೆ.
ಯಶ್ ಅಂಡರ್‌ವರ್ಡ್ ಲೋಕದಲ್ಲಿ ದೊಡ್ಡ ಪ್ರಭಾವ ಹೊಂದಿರುವ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಮೊದಲಿಗೆ ಈ ಚಿತ್ರವನ್ನು 2026 ಮಾರ್ಚ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು.
ಆದರೆ ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬಿಡುಗಡೆ ದಿನಾಂಕವನ್ನು 2026 ಜೂನ್ 4ಕ್ಕೆ ಮುಂದೂಡಲಾಗಿದೆ ಎಂದು ವರದಿಯಾಗಿದೆ.

ಈ ಸುದ್ದಿ ಕೆಲ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರೂ,
“ಲೇಟ್ ಆಗಿ ಬಂದರೂ ಲೇಟೆಸ್ಟ್ ಆಗಿ ಬರಬೇಕು” ಅನ್ನೋ ಮಾತಿನಂತೆ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ ಎಂಬ ನಿರೀಕ್ಷೆ ಇದೆ.

ಬರಹ : ರಶ್ಮಿತಾ ಆಚಾರ್ಯ, ಹೊಸಂಗಡಿ

SHARE
Loading spinner

Leave a Reply

Your email address will not be published. Required fields are marked *

error: Content is protected !!