ಮೊನಾಲಿಸಾ ಇಸ್ ಇನ್ ಟ್ರಬಲ್ (ಕನ್ನಡ ಟೆಲಿ ಚಿತ್ರ) ಮತ್ತೆ ತೆರೆಗೆ

2026 ಮೇ 15,16 ಮತ್ತು 17 ರಂದು ಭಾರತ್ ಸಿನಿಮಾ ದಲ್ಲಿ ಅದ್ದೂರಿ 8 ಯಶಸ್ವಿ ಪ್ರದರ್ಶನ ಕಂಡ ಕರಾವಳಿಯ ಮೊಟ್ಟ ಮೊದಲ ಕನ್ನಡ *ಟೆಲಿ ಸಿನೆಮಾ ಬಹುಜನರ ಅಪೇಕ್ಷೆಯ ಮೇರೆಗೆ *ಮೊನಾಲಿಸಾ ಇಸ್ ಇನ್ ಟ್ರಬಲ್ ಇದೇ ಅಕ್ಟೋಬರ್ 30 ರಂದು ಮಂಗಳೂರಿನ ಭಾರತ್ ಸಿನಿಮಾ ಚಿತ್ರ ಮಂದಿರದಲ್ಲಿ
ಪುನರ್ಬಿಡುಗಡೆಗೊಂಡು ಪ್ರದರ್ಶನಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕರಾದ ಬೃಂದಾವನ್ ಶೆಟ್ಟಿ ತಿಳಿಸಿದ್ದಾರೆ.

ಶ್ರೇಯಸ್ ಕುಮಾರ್ ಫರಂಗಿಪೇಟೆ ಇವರು ಬರೆದಿರುವ ಕಥೆ, ಅಡ್ವೋಕೇಟ್ ನವೀನ್ ಕುಮಾರ್ ಶೆಟ್ಟಿ ನಿರ್ಮಾಣದ, ಬೃಂದಾವನ್ ಎನ್. ಶೆಟ್ಟಿ ನಿರ್ದೇಶನದ ಈ ಟೆಲಿ ಚಿತ್ರ ವಿಭಿನ್ನ ಶೈಲಿಯಲ್ಲಿ ಮೂಡಿ ಬಂದಿದ್ದು, ಪ್ರಸ್ತುತ ಶೈಕ್ಷಣಿಕ ಹಾಗೂ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಈಗಿನ ಮಕ್ಕಳು ಹಾಗೂ , ಪೋಷಕರ ನಡುವಿನ ಅಂತರ, ಮಕ್ಕಳಿಗೆ ಅಂಕಗಳ ಆಧಾರದಲ್ಲಿ ಅವರ ಭವಿಷ್ಯ ನಿರ್ಮಿಸುವ ಭರದಲ್ಲಿ ಅವರ ಭಾವನೆಗಳಿಗೆ ಸ್ಪಂದಿಸದ ಪೋಷಕರ ತೊಳಲಾಟ ಮುಂತಾದ ಪ್ರಮುಖ ಅಂಶಗಳನ್ನು ಭಾವನಾತ್ಮಕವಾಗಿ ಚಿತ್ರೀಸಲಾಗಿದೆ.


ಈಗಿನ ಪೋಷಕರು, ವಿದ್ಯಾರ್ಥಿಗಳು, ಹಾಗೂ ಶಿಕ್ಷಕರೂ ಸಹ ನೋಡಲೇ ಬೇಕಾದ ಅಪರೂಪದ ಸಿನಿಮಾ ಇದಾಗಿದೆ.
ಕಥಾ ನಾಯಕಿಯಾಗಿ ಕು. ವಿನುತಾ ಸಿ. ನಾಯ್ಕ್ ನಿಟ್ಟೆ ( ಮೊನಾಲಿಸಾ ) ಇವರು ಅಭಿನಯಿಸಿರುವ ಮೊಟ್ಟ ಮೊದಲ ಕನ್ನಡ ಟೆಲಿ ಸಿನಿಮಾ ಮೊನಾಲಿಸಾ ಇಸ್ ಇನ್ ಟ್ರಬಲ್.
ಇದೇ ಅಕ್ಟೋಬರ್ 30 ಕ್ಕೆ ಮಂಗಳೂರಿನ ಭಾರತ್ ಸಿನಿಮಾ ಟಾಕೀಸ್ ನಲ್ಲಿ.

SHARE
Loading spinner

Leave a Reply

Your email address will not be published. Required fields are marked *

error: Content is protected !!