ಮಂಜೇಶ್ವರ: ಮಂಜೇಶ್ವರ ಮಂಡಲದ ವಿಧಾನಸಭಾ ಕ್ಷೇತ್ರದ ಚುನಾವಣಾ ಕಚೇರಿಯನ್ನು ಮಂಗಲ್ಪಾಡಿ ಪಂಚಾಯತಿನ ಸೊಂಕಲ್ ನಲ್ಲಿ ಕೇಂದ್ರ ಸಚಿವೆ ಕೇರಳ ರಾಜ್ಯ ವಿಧಾನಸಭಾ ಚುನಾವಣೆಯ ಸಹ ಪ್ರಭಾರಿ, ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎನ್‌ಡಿಎ (NDA) ಚುನಾವಣಾ ಸಮಿತಿ ಕಚೇರಿಯನ್ನು, ವಿಧಾನಸಭಾ ಚುನಾವಣೆಯ ರಾಜ್ಯ ಸಹ-ಪ್ರಭಾರಿಯೂ ಆಗಿರುವ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಉದ್ಘಾಟಿಸಿದರು
ಕೇರಳ ಬಿಜೆಪಿ ರಾಜ್ಯ ಮಾಜಿ ರಾಜ್ಯಾಧ್ಯಕ್ಷರಾದ ಶ್ರೀ ಕೆ ಸುರೇಂದ್ರನ್, ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಪ್ರಭಾರಿ ಕರ್ನಾಟಕ ರಾಜ್ಯ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಶ್ರೀ ಡಾ! ಭರತ್ ಶೆಟ್ಟಿ, ಕೋಜಿಕೋಡ್ ಉತ್ತರ ವಲಯ ಅಧ್ಯಕ್ಷರಾದ ಶ್ರೀ ಅಡ್ವಕೇಟ್ ಶ್ರೀಕಾಂತ್, ಕಾಸರಗೋಡು ಜಿಲ್ಲಾಧ್ಯಕ್ಷೆ ಶ್ರೀಮತಿ ಅಶ್ವಿನಿ ಎಂ ಎಲ್ ಹಾಗೂ ಬಿಜೆಪಿಯ ನಾಯಕರು ಬಿಜೆಪಿಯ ಕಾರ್ಯಕರ್ತರು ಮಾತೆಯರು ಉಪಸ್ಥಿತರಿದ್ದರು….