ಶಿರಿಯ: ಪವಿತ್ರ ರoಝಾನ್ ತಿಂಗಳ ಅಂಗವಾಗಿ ಶಿರಿಯ ಮುಸ್ಲಿಂ ಲೀಗ್ ಸಮಿತಿಯ ವತಿಯಿಂದ ರಮಝಾನ್ ನೆರವು ವಿತರಣೆ ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು. ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ರಹ್ಮಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಅರ್ಹ ಕುಟುಂಬಗಳಿಗೆ ನೆರವು ಕಿಟ್‌ಗಳನ್ನು ಹಾಗೂ ಸುಮಾರು 50 ಮಕ್ಕಳಿಗೆ ಈದ್ ಹಬ್ಬದ ಉಡುಪುಗಳನ್ನು ವಿತರಿಸಲಾಯಿತು. ಮಂಗಲ್ಪಾಡಿ ಮುಸ್ಲಿಂ ಲೀಗ್ ಪಂಚಾಯತ್ ಅಧ್ಯಕ್ಷ ಶಾಹುಲ್ ಹಮೀದ್ ಬಂದಿಯೋಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಸಾಮಾಜಿಕ ಸೇವಾ ಕಾರ್ಯಗಳ ಅಂಗವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಎರಡು ಕುಟುಂಬಗಳಿಗೆ ಕೊಳವೆಬಾವಿ (ಬೋರ್‌ವೆಲ್) ಯೋಜನೆಯನ್ನು ಸಮರ್ಪಿಸಲಾಯಿತು.
16ನೇ ವಾರ್ಡ್ ಪ್ರಧಾನ ಕಾರ್ಯದರ್ಶಿ ಮಜೀದ್ ಕುಂಬೋಲ್ ಸ್ವಾಗತಿಸಿದರು. ವಾರ್ಡ್ ಅಧ್ಯಕ್ಷ ಅಬು ಶಿರಿಯ, 16ನೇ ವಾರ್ಡ್ ಸದಸ್ಯ ಸಿದ್ದೀಕ್ ಶಿರಿಯ, ಕೋಶಾಧಿಕಾರಿ ಹನೀಫ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಾರ್ಡ್ ಸಮಿತಿ ಸದಸ್ಯರು ಹಾಗೂ ಗಣ್ಯರು ಸಹ ಭಾಗವಹಿಸಿದ್ದರು.
ರಮಝಾನ್‌ನ ಮಹತ್ವವನ್ನು ಅರಿತು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ವಕ್ತಾರರು ಹೇಳಿದರು. ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲ ಕಾರ್ಯಕರ್ತರು ಮತ್ತು ಸ್ಥಳೀಯರಿಗೆ ಸಮಿತಿಯವರು ಧನ್ಯವಾದವಿತ್ತರು .