ವೆಲೆನ್ಸಿಯ ವಾರ್ಡಿನಲ್ಲಿ ₹20 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 48ನೇ ವೆಲೆನ್ಸಿಯ ವಾರ್ಡಿನ ರೆಡ್ ಬಿಲ್ಡಿಂಗ್ ರೋಹನ್ ಕಾರ್ಪೋರೇಷನ್ ಹಿಂಭಾಗ ರಸ್ತೆಯ ಅಭಿವೃದ್ಧಿ ಕಾಮಗಾರಿಯು 20ಲಕ್ಷ ರೂ. ವಿಶೇಷ ಅನುದಾನದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆಯು ನಡೆಯಿತು.

ನಂತರ ಮಾತನಾಡಿದ ಶಾಸಕರು, ಈ ಭಾಗದಲ್ಲಿ ಸುಮಾರು 300 ಮನೆಗಳಿದ್ದು ಅವರೆಲ್ಲರ ಬಹುದಿನಗಳ ಬೇಡಿಕೆಯಂತೆ ಈ ರಸ್ತೆಯು ನಿರ್ಮಾಣವಾಗಲಿದ್ದು ಕಾಮಗಾರಿ ವೇಳೆ ಉಂಟಾಗುವ ಅಡಚಣೆಗೆ ಸಹಕರಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯರಾದ ಸಂದೀಪ್ ಗರೋಡಿ, ಪ್ರಮುಖರಾದ ಪ್ರಕಾಶ್ ಗರೋಡಿ, ಜೇಮ್ಸ್ ಡಿಸೋಜ, ಪ್ರವೀಣ್ ನಿಡ್ಡೆಲ್, ವರುಣ್ ರಾಜ್ ಅಂಬಟ್, ಪದ್ಮನಾಭ, ನಾಗರಾಜ್, ಕೃತಿಕ್ ಉಜ್ಜೋಡಿ, ಮನ್ವಿತ್, ಸೇರಿದಂತೆ ಪರಿಸರದ ನಿವಾಸಿಗಳು, ವಾರ್ಡಿನ ಕಾರ್ಯಕರ್ತರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!