ಮಂಜೇಶ್ವರ: ಉದ್ಯಾವರ ನಿವಾಸಿ 22 ವರ್ಷದ ಯುವಕನೊಬ್ಬ ತನ್ನ ಮನೆಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.ಮಂಜೇಶ್ವರ ಉದ್ಯಾವರ ತಹಾನಿ ಮಂಜಿಲ್ ನ್ಯೂ ಮಸಲ್ ಹೌಸ್ ನಿವಾಸಿ ಮುಹಮ್ಮದ್ ತಾಹಾ (22) ಮೃತಪಟ್ಟ ಯುವಕ.ಮನೆಯವರು ಸಂಬಂಧಿಕರ ಮನೆಗೆ ಹೋಗಿ ವಾಪಸ್ ಬಂದಾಗ ತಾಹಾ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಮೃತರು ತಂದೆ ಮುಹಮ್ಮದ್ ಅಶ್ರಫ್, ತಾಯಿ ತಾಹಿರಾ ಹಾಗೂ ಸಹೋದರಿಯರಾದ ತಹಾನಿ ಮತ್ತು ತನ್ಸಿ ಅವರನ್ನು ಅಗಲಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.