ಮಂಗಳೂರಿನಲ್ಲಿ ಚೆಮ್ಮಣೂರು ಇಂಟರ್‌ನ್ಯಾಷನಲ್ ಜುವೆಲ್ಲರ್ಸ್ ನೂತನ ಶೋರೂಮ್ ಉದ್ಘಾಟನೆ

ಮಂಗಳೂರು: ಚೆಮ್ಮಣೂರು ಇಂಟರ್‌ನ್ಯಾಷನಲ್ ಜುವೆಲ್ಲರ್ಸ್‌ನ ನೂತನ ಶೋರೂಮ್ ಉದ್ಘಾಟನಾ ಕಾರ್ಯಕ್ರಮವು ಹಂಪನಕಟ್ಟೆಯ ಕ್ಲಾಕ್ ಟವರ್ ಸಮೀಪದಲ್ಲಿರುವ ಶೋರೂಮ್‌ನಲ್ಲಿ ಸಂಜೆ 5 ಗಂಟೆಗೆ ಮಂಗಳೂರು ನಗರದಲ್ಲಿ ಭಾನುವಾರ, ಮಾರ್ಚ್ 22ರಂದು ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವನ್ನು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಡಿಯೋ ಮೂಲಕ ಅಭಿನಂದನೆ ಸಲ್ಲಿಸಿದರು . ಮುಖ್ಯ ಅತಿಥಿಯಾಗಿ ಬಾಲಿವುಡ್ ನಟ ಇಮ್ರಾನ್ ಹಶ್ಮಿ, ಭಾಗವಹಿಸಿದರು. ವಿಶೇಷ ಅತಿಥಿಯಾಗಿ 812 ಕಿಮೀ ಓಟದ ವಿಶಿಷ್ಟ ವಿಶ್ವ ದಾಖಲೆ ಹಾಗೂ ಗಿನ್ನೆಸ್ ದಾಖಲೆ ಸಾಧಿಸಿರುವ ಚೆಮ್ಮಣೂರು ಮಾಲೀಕ ಬೋಚೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಶಾಸಕ ವೇದವ್ಯಾಸ ಕಾಮತ್ ಹಾಗೂ ಸ್ಯಾಂಡಲ್‌ವುಡ್ ನಟ ಉಪೇಂದ್ರ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ಧರು
ಕಾರ್ಯಕ್ರಮದಲ್ಲಿ ಗಣ್ಯರು, ಆಹ್ವಾನಿತರು ಮತ್ತು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!