ಕಾಸರಗೋಡು ನಗರದ ಸಮೀಪದ ನುಳ್ಳಿಪ್ಪಾಡಿಯ ಪಿ.ಎಂ.ಎಸ್. ರಸ್ತೆಯಲ್ಲಿರುವ ಅನಂಗೂರ್ ಶ್ರೀ ಧೂಮಾವತಿ ದೈವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಧರ್ಮ ನೇಮ ಕಾರ್ಯಕ್ರಮವು ಈ ಬಾರಿ ಏಪ್ರಿಲ್ 5, ಭಾನುವಾರ ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ಮಾರ್ಚ್ 27, 2026ರಂದು ತಂಬಿಲ ಸೇವೆ ನಡೆಯಲಿದ್ದು, ಏಪ್ರಿಲ್ 4 ಶನಿವಾರ ಸಂಜೆ 7ಕ್ಕೆ ಗುಳಿಗನ ಕೋಲ ಹಾಗೂ ರಾತ್ರಿ 8ಕ್ಕೆ ಯಕ್ಷಗಾನ ಬಯಲಾಟ ಏರ್ಪಡಿಸಲಾಗಿದೆ.
ಏಪ್ರಿಲ್ 5 ಭಾನುವಾರ ಬೆಳಿಗ್ಗೆ 9ರಿಂದ ಧೂಮಾವತಿ ದೈವ ಕೋಲ ಮತ್ತು ಅನ್ನಸಂತರ್ಪಣೆ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಯ ನಂತರ ಇತರ ದೈವ ಕೋಲಗಳು ನಡೆಯಲಿವೆ. ಸಂಜೆ 4ಕ್ಕೆ ಕಾರಣಿಕ ಪೊಟ್ಟ ದೈವ ಕೋಲ ಮತ್ತು ರಾತ್ರಿ 8ಕ್ಕೆ ಸಮೀಪದ ಕಾಯರ್ಪಳ್ಳ ಗುಳಿಗ ಬನದಲ್ಲಿ ಗುಳಿಗನ ಕೋಲದೊಂದಿಗೆ ಧರ್ಮ ನೇಮ ಸಮಾಪ್ತಿಯಾಗಲಿದೆ. ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕೆಂದು ದೈವಸ್ಥಾನದ ಮೊಕ್ತೇಸರರಾದ ಶ್ರೀ ಗೋಪಾಲಕೃಷ್ಣ ಶೆಟ್ಟಿ ಮನವಿ ಮಾಡಿದ್ದಾರೆ.
ವರದಿ: ಡಾ. ವಾಮನ್ ರಾವ್ ಬೇಕಲ್.