ಕಾಸರಗೋಡಿನ ಕನ್ನಡ ಭವನ, ಗ್ರಂಥಾಲಯ (ರಿ) ಗದಗ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಶಿರಹಟ್ಟಿಯ ಫಕೀರೇಶ್ವರ ನಗರದ ಎಚ್.ಎಂ. ದೇವಗಿರಿ ಅವರ ನಿವಾಸದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಸಂಗಮೇಶ ತಮ್ಮನಗೌಡ್ರ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಹೊಸ ಪದಾಧಿಕಾರಿಗಳನ್ನು ಅಧಿಕೃತವಾಗಿ ಘೋಷಿಸಲಾಯಿತು. ಡಾ. ಸಂಗಮೇಶ ತಮ್ಮನಗೌಡ್ರ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಗೌರವಾಧ್ಯಕ್ಷರಾಗಿ ಪೂಜ್ಯಶ್ರೀ ಶಾಂತಲಿಂಗ ಮಹಾಸ್ವಾಮೀಜಿಗಳು ಹಾಗೂ ಪೂಜ್ಯಶ್ರೀ ರಮೇಶ ಮಹಾಸ್ವಾಮಿಗಳು ನೇಮಕಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ರತ್ನಾ ಗಿರೋಸಾ ಬದಿ, ಕಾರ್ಯದರ್ಶಿಯಾಗಿ ಸುಭಾಷ್ ಎಚ್. ಪೂಜಾರ, ಜೊತೆ ಕಾರ್ಯದರ್ಶಿಯಾಗಿ ಶಿವಾನಂದ ಪರಸಣ್ಣವರ ಮತ್ತು ಕೋಶಾಧ್ಯಕ್ಷರಾಗಿ ಎಂ.ಎಂ. ಖಂಡೋಜಿ ಆಯ್ಕೆಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ಸ್ಥಳಗಳಿಂದ ಆಯ್ಕೆಯಾದ ಕಾರ್ಯಕಾರಿ ಮಂಡಳಿ ಸದಸ್ಯರ ಪಟ್ಟಿಯನ್ನೂ ಪ್ರಕಟಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರುಗಳಿಗೆ ಕಾಸರಗೋಡಿನ ಕನ್ನಡ ಭವನ, ಗ್ರಂಥಾಲಯ (ರಿ) ಸಂಸ್ಥಾಪಕರಾದ ಡಾ. ವಾಮನರಾವ್ ಬೇಕಲ್ ಅವರು ಅನುಮೋದನೆ ನೀಡಿರುವುದಾಗಿ ತಿಳಿಸಲಾಯಿತು. ಈ ಕಾರ್ಯಕ್ರಮವು ಕನ್ನಡ ಭವನದ ಸಂಘಟನೆ ಬಲಪಡಿಸುವ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.


