ಮಂಜೇಶ್ವರ ಕ್ಷೇತ್ರದಲ್ಲಿ ಸುರೇಂದ್ರನ್ ಪರ ರಾಜೇಶ್ ನಾಯ್ಕ್ ಮತಯಾಚನೆ

ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಸುರೇಂದ್ರನ್ ಅವರ ಪರವಾಗಿ ಮತ ನೀಡುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾ.26 ರಂದು ಗುರುವಾರ ಬೆಳಿಗ್ಗೆಯಿಂದ ವರ್ಕಾಡಿ ಗ್ರಾ.ಪಂ‌.ವ್ಯಾಪ್ತಿಯಲ್ಲಿ ಮನೆಮನೆಗೆ ತೆರಳಿ ಮತಯಾಚಿಸಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಹತ್ತಿರದ ಕ್ಷೇತ್ರವಾಗಿರುವ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ವರ್ಕಾಡಿ ಗ್ರಾಮದಲ್ಲಿರುವ ವರ್ಕಾಡಿ ಬಿಜೆಪಿ ಕಚೇರಿಗೆ ಬೇಟಿ ನೀಡಿದ ಅವರು ಕಾರ್ಯಕರ್ತರ ಜೊತೆ ಚರ್ಚಿಸಿದರು. ಬಳಿಕ ಕಾರ್ಯಕರ್ತರ ಜೊತೆಗೆ ತೆರಳಿದ ಅವರು ಮತದಾರರ ಮನವೊಲಿಸಿ ಮತನೀಡುವಂತೆ ಮನವಿ ಮಾಡಿದರು.


ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ಸುರೇಂದ್ರನ್ ಅವರು ಯಾವ ಕಾರಣಕ್ಕಾಗಿ ಗೆಲ್ಲಬೇಕು ಎಂಬುದನ್ನು ಮನದಟ್ಟು ಮಾಡಿದರು. ಸಂಜೆ ವೇಳೆ ಮಂಜೇಶ್ವರದ ಬಿಜೆಪಿ ಚುನಾವಣಾ ಕಚೇರಿಗೆ ತೆರಳಿ ಅಲ್ಲಿ ಪ್ರಮುಖರ ಜೊತೆಗೆ ಕೆಲ ಹೊತ್ತು ಪೂರ್ವ ತಯಾರಿಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಸದಸ್ಯ ರಾಜ್ ಕುಮಾರ್ ಶೆಟ್ಟಿ, ವರ್ಕಾಡಿ‌ ಪಂಚಾಯತ್ ಸಮಿತಿ ಅದ್ಯಕ್ಷ ಭಾಸ್ಕರ ನಾಯ್ಕ್ ಪೊಯ್ಯೆ,ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಯತಿರಾಜ್ ಶೆಟ್ಟಿ ಬಿಜೆಪಿ ಕಾರ್ಯಕರ್ತರಾದ ರಾಜೇಶ್ ಮದಕ, ರವಿರಾಜ್,ವರ್ಕಾಡಿ ಗ್ರಾ.ಪಂ.ಸದಸ್ಯರಾದ ತುಳಸಿ, ಮಮತಾ, ಮಂಡಲದ ಕಾರ್ಯದರ್ಶಿ ಸಂತೋಷ್ ದೈಯಿಗೊಳಿ, ಬಿಜೆಪಿ ಪ್ರಮುಖರಾದ ಮಮತಾ ಕುಲಾಲ್, ಮಮತಾ ಮುನಿಬೈಲು, ಕಾರ್ತಿಕ್ ಮುಗುಳಿ,ದ.ಕ.ಜಿಲ್ಲಾ ಬಿಜೆಪಿ ಜಿಲ್ಲಾ ವಕ್ತಾರ ಮಾದವ ಮಾವೆ, ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ ಬಜ, ಶಿವಪ್ರಸಾದ್ ಶೆಟ್ಟಿ, ಬಂಟ್ವಾಳ ಮಂಡಲದ ಕಾರ್ಯದರ್ಶಿ ಹರ್ಷಿಣಿಪುಷ್ಪಾನಂದ, ಮಾದ್ಯಮ ಪ್ರಮುಖ್ ಪುರುಷೋತ್ತಮ ಶೆಟ್ಟಿ ವಾಮದಪದವು,ಬಂಟ್ವಾಳ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ ಪ್ರಣಮ್ ಅಜ್ಜಿಬೆಟ್ಟು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!