ಮಂಜೇಶ್ವರ : ಚಿಗುರುಪಾದೆ ಯಲ್ಲಿ ಪಿ.ವಿ ಭಟ್ ಸಂಸ್ಮರಣೆ , ನುಡಿನಮನ ಕಾರ್ಯಕ್ರಮ

ಮಂಜೇಶ್ವರ: ಇತ್ತೀಚಿಕೆಗೆ ನಿಧನರಾದ ಪಿ.ವಿ ಭಟ್ ಸಂಸ್ಮರಣೆ ಮತ್ತು ನುಡಿನಮನ ಕಾರ್ಯಕ್ರಮ ಮೀಯಪದವು ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಹಾಗೂ ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಎನ್.ವಿಜಯಕುಮಾರ್ ರೈ ಮಾತನಾಡಿ, ಪಿ.ವಿ ಭಟ್ ಅಪ್ರತಿಮ ಸಂಘಟಣಾ ಚತುರರಾಗಿದ್ದು ಬಿಜೆಪಿ ಬೆಳವಣಿಗೆಗೆ ಹಾಗೂ ಮಂಜೇಶ್ವರ ಮತ್ತು ಮೀಂಜ ಮೊದಲಾದ ಪ್ರದೇಶಗಳಲ್ಲಿ ಸಂಘಟನೆಯನ್ನು ಬೆಳಗಿಸಲು ಪಕ್ಷದ ನೇತಾರರಾಗಿದ್ದ ಪಿ.ವಿ.ಭಟ್ ಅವರ ಕೊಡುಗೆ ಅಪಾರವಾಗಿತ್ತು.

ಅವರ ತ್ಯಾಗಯುತ ಜೀವನ ಇಂದಿನ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಮಾದರಿ ಎಂದು ಅಭಿಪ್ರಾಯ ವಕ್ತಪಡಿಸಿದರು.
ಬಿಜೆಪಿ ಮೀಂಜ ಪಂಚಾಯತ್ ಸಮಿತಿಯ ಅಧ್ಯಕ್ಷ ಚಂದ್ರಹಾಸ ಬೆಜ್ಜ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., ನೇತಾರರದ ಎಂ.ಹರಿಶ್ಚಂದ್ರ ಮಂಜೇಶ್ವರ, ತಿಮ್ಮಪ್ಪ ಮೀಯಪದವು, ಶುಭಾನಂದ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಕೆ.ವಿ.ಭಟ್ ಸ್ವಾಗತಿಸಿ, ಮಂಜುನಾಥ ಭಂಡಾರಿ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!