ತಿಬ್ಲಪದವು: ಮನೆ ಗೋಡೆಗೆ ಹಾರಿ ಬಡಿದ ಕಾರು.ಭೀಕರ ಅಪಘಾತ, ಅಚ್ಚರಿಯ ರೀತಿಯಲ್ಲಿ ಪಾರಾದ ಪ್ರಯಾಣಿಕರು

ನಾಟೇಕಲ್: ಇಲ್ಲಿಗೆ ಸಮೀಪದ ತಿಬ್ಲಪದವು ಮಸೀದಿ ಸಭಾಂಗಣದ ಬಳಿ ನಿನ್ನೆ ತಡರಾತ್ರಿ ಭೀಕರ ಕಾರು ಅಪಘಾತ ಸಂಭವಿಸಿದೆ.ಕೋಣಾಜೆ ಕಡೆಯಿಂದ ದೇರಳಕಟ್ಟೆ ಕಡೆಗೆ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಸುಮಾರು 10 ಅಡಿ ಆಳಕ್ಕೆ ಜಿಗಿದು, ಸಭಾಂಗಣ ಕಟ್ಟಡದ ಗೋಡೆಗೆ ಬಡಿದು ಕೆಳಕ್ಕೆ ಉರುಳಿದೆ.

ಅಪಘಾತದ ತೀವ್ರತೆ ಭೀಕರವಾಗಿದ್ದರೂ, ವಾಹನದಲ್ಲಿದ್ದವರು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಘಟನೆಯ ಕುರಿತು ಮಂಗಳೂರು ದಕ್ಷಿಣ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!