ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಕ್ರೀಡಾಪಟುಗಳ ಯುವ ಸಮ್ಮೇಳನವನ್ನು ರಾಜ್ಯಸಭಾ ಸಂಸದೆ ಹಾಗೂ ರಾಷ್ಟ್ರೀಯ ಒಲಿಂಪಿಕ್ ಫೆಡರೇಶನ್ ಅಧ್ಯಕ್ಷೆ ಪಿ.ಟಿ. ಉಷಾ ಉದ್ಘಾಟಿಸಿದರು.
ಸಮಾರಂಭದಲ್ಲಿ ಮಂಜೇಶ್ವರ ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಭಾಗವಹಿಸಿದ್ದರು. ಕ್ಷೇತ್ರದ ವಿವಿಧ ಕ್ಲಬ್‌ಗಳ ಪದಾಧಿಕಾರಿಗಳು ಪಾಲ್ಗೊಂಡ ಸಭೆಯಲ್ಲಿ ಪಿ.ಟಿ. ಉಷಾ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದರು.
ಈ ವೇಳೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದ ಮಂಜೇಶ್ವರದ ಮಕ್ಕಳಿಗೆ ಪಿ.ಟಿ. ಉಷಾ ಸ್ಮರಣಿಕೆಗಳನ್ನು ವಿತರಿಸಿದರು.
ಹೊಸಂಗಡಿ ಪ್ರೇರಣಾ ಸಭಾಂಗಣದಲ್ಲಿ ಕ್ರೀಡಾ ಭಾರತಿ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ-ಚಿಕ್ಕಮಂಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕೋಝಿಕ್ಕೋಡ್ ಪ್ರದೇಶ ಅಧ್ಯಕ್ಷ ಕೆ. ಶ್ರೀಕಾಂತ್ ಮಾತನಾಡಿದರು.
ಮೀರಾ ಆಳ್ವ, ಆದರ್ಶ್ ಬಿ. ಮಂಜೇಶ್ವರ, ಸುನಿಲ್ ಅನಂತಪುರ, ಎ.ಕೆ. ಕಯ್ಯರ್ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.