ಕುಂಬಳೆ: ಕುಂಬಳೆ ಅರಿಕ್ಕಾಡಿ ಪಾರೆ ಸ್ಥಾನದಲ್ಲಿರುವ ಶ್ರೀ ಆಲಿಚಾಮುಂಡಿ ಶ್ರೀ ಭಗವತಿ ದೇವಸ್ಥಾನದಲ್ಲಿ ವಾರ್ಷಿಕೋತ್ಸವದ ಕಳಿಯಾಟ ಪ್ರಯುಕ್ತ ಶ್ರೀ ನಾರಾಯಣ ಗುರು ವನಿತಾ ಸ್ವಸಹಾಯ ಸಂಘದ ವತಿಯಿಂದ 10ನೇ ವರ್ಷದ ಸಂಸ್ಕೃತಿ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮಕ್ಕೆ ದೇವಸ್ಥಾನದ ಅಧ್ಯಕ್ಷ ಸಂತೋಷ್ ಕುಂಬಳೆ ಅಧ್ಯಕ್ಷತೆ ವಹಿಸಿದರು. ತೀಯಾ ಮಹಾಸಭಾ ಅಧ್ಯಕ್ಷ ಗಣೇಶ್ ಮಂಗಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು, ಕಾರ್ಯದರ್ಶಿ ನಾಗೇಶ್ ಬಳ್ಳಂಬಾಡಿ, ಸದಾಶಿವ ಕಳತೋರು, ನವೀನ್ ಕುಮಾರ್ ಅರಿಕ್ಕಾಡಿ, ಕರುಣಾಕರ ಮುಜಿಂಗವು, ಪ್ರಸನ್ನ ಕಳತೂರು, ಜಯಂತ ಭಂಡಾರ ಮನೆ, ರವಿ ಶಾಂತಿ ಪಳ್ಳ, ಸಜಿತ್ ಮಾಣಿ, ಪ್ರಕಾಶ್ ಬಟ್ಟೆಹಿತಲು, ಸುನಿಲ್ ಕುಂಬಳೆ, ಜಯಕುಮಾರ್ ಕೃಷ್ಣನಗರ, ಸೌಮ್ಯ ಅರಿಕಾಡಿ, ಶ್ಯಾಮಲಾ ಕುಂಬಳೆ, ದೀಪಾ ಅರಿಕ್ಕಾಡಿ ಸೇರಿದಂತೆ ಅನೇಕರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಸೌಮ್ಯ ಸ್ವಾಗತಿಸಿದರು ಹಾಗೂ ಶ್ಯಾಮಲಾ ವಂದಿಸಿದರು.