ಮಂಜೇಶ್ವರ : ಬಾಯಾರು ಕುಟುಂಬ ಆರೋಗ್ಯ ಕೇಂದ್ರದ ಅವಗಣನೆಗೆ ಎದುರಾಗಿ ಯು ಡಿ ಎಫ್ ಪೈವಳಿಕೆ ಪಂಚಾಯತ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮಾರ್ಚ್ ಮತ್ತು ಧರಣಿ ನಡೆಸಿತು.
ನೂತನ ಕಟ್ಟಡ ಚಿಕಿತ್ಸಾ ಸೌಲಭ್ಯಗಳೊಂದಿಗೆ ಆಸ್ಪತ್ರೆ ಕೂಡಲೇ ಕಾರ್ಯಾಚರಿಸಬೇಕು,ಅಗತ್ಯ ವೈದ್ಯರ ಸೇವೆ ಲಭ್ಯವಾಗಬೇಕು,ಅಗತ್ಯದ ಔಷಧಗಳ ಲಭ್ಯತೆ ಖಾತರಿಪಡಿಸಬೇಕು ಮತ್ತು ಸಂಧ್ಯಾ ಸಮಯದಲ್ಲಿ ಹೊರ ರೋಗಿಗಳ ವಿಭಾಗ ಕಾರ್ಯಾಚರಿಸಬೇಕು.ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಗ್ರಾಮಾಧಿಕಾರಿ ಕಚೇರಿ ಪರಿಸರದಿಂದ ಆರಂಭಗೊಂಡ ಮಾರ್ಚ್ ಕುಟುಂಬ ಆರೋಗ್ಯ ಕೇಂದ್ರ ಪರಿಸರದಲ್ಲಿ ಸಮಾಪ್ತಿಗೊಂಡಿತು.
ನಂತರ ನಡೆದ ಪ್ರತಿಭಟನಾ ಸಭೆಯಲ್ಲಿ ವಸಂತ ಮಾಸ್ಟರ್ ಅಧ್ಯಕ್ಷತೆ ವಹಿಸಿದರು.ಝಡ್ ಎ ಕೈಯಾರ್ ಸ್ವಾಗತಿಸಿ ಯು ಡಿ ಎಫ್ ಮಂಜೇಶ್ವರ ಅಸೆಂಬ್ಲಿ ಸಮಿತಿಯ ಚಯರ್ಮೆನ್ ಅಸೀಸ್ ಮರೀಕೆ ಉದ್ಘಾಟಿಸಿದರು..ಕಾರ್ಯಕ್ರಮದಲ್ಲಿ ಆದಿತ ಕುಂಞಾಲಿ,ಶಾಹಿ ಹಾಜೀ ಕಳಾಯೀ,ಅಸೀಸ್ ಕಳಾಯೀ,ಅಬ್ದುಲ್ಲ ಹಾಜಿ,ರಾಘವೇಂದ್ರ ಭಟ್,ಆದಂ ಬಳ್ಳೂರು,ಅಸೀಸ್ ಚೇವಾರ್,ಪಿಓ ಅಶ್ರಫ್,ಉಸ್ಮಾನ್ ಹಾಜಿ,ರಾಮ್ ಭಟ್,ಕೇಆರ್ ಕನ್ನಾಂದುರ್,ಇಬ್ರಾಹೀಂ ಪದವು,ಸತ್ತಾರ್ ಸಜಂಕೀಲ,ಉಮೇಶ್ ಬಾಯಾರು ಮೊದಲಾದವರು ಭಾಗವಹಿಸಿದರು.