ಎನ್‌ಎಸ್‌ಯುಐ 56ನೇ ಸಂಸ್ಥಾಪನಾ ದಿನ: ಮಲ್ಲಿಕಟ್ಟೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ

NSUI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ NSUI ನ 56ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ “ಧ್ವಜಾರೋಹಣ” ಕಾರ್ಯಕ್ರಮ ಮಲ್ಲಿಕಟ್ಟೆಯ ಇಂದಿರಾ ಭವನದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿಸೋಜಾ NSUI ವಿದ್ಯಾರ್ಥಿ ಸಂಘಟನೆಯ ಹೋರಾಟ, ಇತಿಹಾಸ, ಸಂಘಟನೆಯ ಕಾರ್ಯಕರ್ತರು ಸಾಮಾಜಿಕ ನ್ಯಾಯ, ಸಮಾನತೆ, ಸತ್ಯದಪರವಾದ ಹೋರಾಟಗಳಲ್ಲಿ ತೊಡಗಿಸಿಕೊಂಡು ದೇಶಕ್ಕೆ ಅನನ್ಯ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿ NSUI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುಹಾನ್ ಅಳ್ವ, NSUI ರಾಜ್ಯ ಕಾರ್ಯದರ್ಶಿ ಬಾತಿಷ್ ಅಳಕೆಮಜಲು, ಜಿಲ್ಲಾ ಉಪಾಧ್ಯಕ್ಷ ಸುಖ್ವಿಂದರ್ ಸಿಂಗ್, ಕೀರ್ತನ್ ಕೊಡಪಾಲ, ಶಾನ್ ಸಿರಿ, ನಜೀಬ್ ಮಂಚಿ, NSUI ಮಂಗಳೂರು ವಿಶ್ವವಿದ್ಯಾನಿಲಯ ಅಧ್ಯಕ್ಷ ಸಫ್ವಾನ್ ಕುದ್ರೋಳಿ, NSUI ವಿಧಾನಸಭಾ ಅಧ್ಯಕ್ಷರಾದ ಧನುಶ್ ಕುಕ್ಕೆಟ್ಟಿ, ಸಾಹಿಲ್ ಮಂಚಿಲ, ಕ್ರಿಸ್ಟನ್ ಮಿನೇಜಸ್, ಸಫ್ವಾನ್ ಬಂಟ್ವಾಳ ಹಾಗೂ NSUI ಕಾರ್ಯಕರ್ತರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!