ದೈವ ಮರಕಲ ಅಂಗಳವು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಸಾವಿರಾರು ಭಕ್ತರು ಕಂಡನಾರ್ ಕೇಳನ್ ವೆಳ್ಳಾಟಂ ದರ್ಶನ ಪಡೆದು ಭಕ್ತಿಭಾವದಲ್ಲಿ ತೇಲಿದರು. ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಚೇಟ್ಟುಕುಂಡು ಕೀಕಾನ ಮೀತಲ್ ವೀಡ್ ತರವಾಡಿನಲ್ಲಿ ವಯನಾಟು ಕುಲವನ್ ದೈವಕಟ್ಟು ಮಹೋತ್ಸವದ ಅಂಗವಾಗಿ ಮಂಗಲದಾಯಕ ಮೂರ್ತಿಯ ದಿವ್ಯ ದರ್ಶನ ನಿನ್ನೆಯ ದಿನವಾಯಿತ್ತು .
ಸುಮಾರು ನೂರು ವರ್ಷಗಳ ಬಳಿಕ ಕೀಕಾನ ಗ್ರಾಮದಲ್ಲಿ ಕಂಡನಾರ್ ಕೇಳನ್ ವೆಳ್ಳಾಟಂ ದರ್ಶನ ನೀಡಿದ್ದು, ಸಾಕ್ಷಾತ್ ಶಿವಾಂಶ ಹೊಂದಿದ ದೈವದ ಅವತಾರ ಭಕ್ತರಲ್ಲಿ ಮೈ ರೋಮಾಂಚನ ಮೂಡಿಸಿತು. ದೈವದ ವೀರ ಕಲೆ, ಬೇಟೆಯ ಚಾಣಾಕ್ಷತನ , ಬಪ್ಪಿಡಲ್ ಆಚರಣೆ ಮತ್ತು ಅಬ್ಬರದ ಪ್ರವೇಶವನ್ನು ಕಣ್ತುಂಬಿಕೊಳ್ಳಲು ಭಕ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.
ಉತ್ತರ ಕೇರಳದ ದೈವಾರಾಧನೆಗೆ ತುಳುನಾಡಿನ ಸಂಸ್ಕೃತಿಯೊಂದಿಗೆ ಆಳವಾದ ಸಂಬಂಧವಿದ್ದು, ಕಾಸರಗೋಡು ಹಾಗೂ ಗಡಿಭಾಗಗಳಲ್ಲಿ ಮಾತ್ರ ಆಚರಿಸಲ್ಪಡುವ ವಯನಾಟು ಕುಲವನ್ ತೆಯ್ಯಂ ಕೆಟ್ಟು ಅಪರೂಪದ ಆಚರಣೆ ಎಂದು ಪರಿಗಣಿಸಲಾಗಿದೆ. ತೀಯಾ ಸಮುದಾಯದ ತರವಾಡು ಮನೆಗಳಲ್ಲಿ 3 ದಿನಗಳ ಕಾಲ ಈ ದೈವಕಟ್ಟು ಮಹೋತ್ಸವ ನಡೆಯುವುದು ವಿಶೇಷ.
ದೈವಾಂಗಣ ಪ್ರವೇಶದ ಸುಮಂಗಳ ದೃಶ್ಯ ಭಕ್ತರಿಗೆ ಕಣ್ಣಿಗೆ ಹಬ್ಬವಾಗಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.