ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಂಸ್ಥೆಯು (ನಿಕೋ) ವತಿಯಿಂದ ಕ್ಯಾಂಪ್ಕೋ ಸಹಯೋಗದಲ್ಲಿ ಮಂಗಳೂರಿನ ಅತಿದೊಡ್ಡ ಚಾಕೊಲೇಟ್ ಹಬ್ಬ ‘ಚಾಕೊಲೇಟ್ ಸ್ಟ್ರೀಟ್’ನ 7ನೇ ಆವೃತ್ತಿ ಎ.11 ಮತ್ತು 12 ರಂದು ನಗರದ ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಆಯೋಜಿಸಲಿದೆ ಎಂದು ನಿಟ್ಟೆ ಇನ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಮುಖ್ಯಸ್ಥೆ ಡಾ. ಮೌಲ್ಯ ಬಾಲಾಡಿ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸೊಲ್ಮೆಲು ಚಾಕೊಲೇಟ್ ಸಂಸ್ಥೆಯ ಸ್ಥಾಪಕ ಮಯೂರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಎರಡು ದಿನಗಳ ಈ ಉತ್ಸವವು ಸೃಜನಶೀಲತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ , ವಿವಿಧ ಮನರಂಜನಾ ಚಟುವಟಿಕೆಗಳು, ಆಟಗಳು ಹಾಗೂ ಯುವ ಕಲಾವಿದರಿಗಾಗಿ ಓಪನ್ ಮೈಕ್ ಕಾರ್ಯ ಕ್ರಮಗಳನ್ನು ಒಳಗೊಂಡಿರಲಿದೆ. ಈ ವರ್ಷದ ವಿಶೇಷ ಆಕರ್ಷಣೆಯಾಗಿ ಉತ್ಸವದ ಅಧಿಕೃತ ಲಾಂಛನ ಬೆನ್ನಿ ಗಮನ ಸೆಳೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೋಧಕ ಸಂಯೋಜಕ ಪ್ರಕಾಶ್, ಇವೆಂಟ್ ಮ್ಯಾನೇಜರ್ ಹಲೀಮ ಶಿಝಾ, ರಾಹುಲ್ ವಿ.ಬಿ. ಉಪಸ್ಥಿತರಿದ್ದರು.