ಪೈಪ್ ಒಡೆದು ನಗರ ಜಲಾವೃತ: ಬಿಸಿರೋಡು ರಸ್ತೆಯಲ್ಲಿ ಸಂಚಾರ ಸಂಕಷ್ಟ

ಬಂಟ್ವಾಳ: ಕಂಪೆನಿಯೊಂದರ ಕಾಮಗಾರಿ ನಡೆಸುವ ವೇಳೆ ಕುಡಿಯುವ ನೀರಿನ ಪೈಪ್ ಗೆ ಹಾನಿಯಾಗಿ ಬಿಸಿರೋಡು ನಗರದ ರಾಷ್ಟ್ರೀಯ ಹೆದ್ದಾರಿ ಸಹಿತ ಅಂಗಡಿ ಬಾಗಿಲುಗಳಲ್ಲಿ ಕೆಸರು ಮಿಶ್ರಿತ ನೀರು ಶೇಖರಣೆಯಾಗಿದೆ.


ಶನಿವಾರ ಬೆಳ್ಳಂಬೆಳಗ್ಗೆ ಬಿ.ಸಿ.ರೋಡಿನ ಮೂಲಕ ಸಂಚರಿಸುವವರು ಇಲ್ಲೇನು ಮಳೆ ಬಂದಿದೆಯೇ ಅಂದುಕೊಂಡಿರಬಹುದು. ಬಿಸಿರೋಡು ನಗರ ಸುತ್ತಲೂ ಕೃತಕ ನೆರೆಯಂತಾಗಿದ್ದು, ಪಾದಾಚಾರಿಗಳು ನಡೆದಾಡಲೂ ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಬಿ.ಸಿ.ರೋಡಿನ ಫ್ಲೈಓವರ್ ನ ಮುಂಭಾಗ ಧಾರಾಳವಾಗಿ ನೀರು ರಸ್ತೆಯ ಮೇಲೆ ಹರಿದುಹೋಗುತ್ತಿದ್ದು, ವಾಹನ ಸವಾರರ ಚಕ್ರವೆಲ್ಲಾ ತೊಳೆದುಹೋಗುವಂತೆ ನೀರು ರಸ್ತೆಯಲ್ಲಿದೆ. ಗೆಲ್ ( Gail) ಗ್ಯಾಸ್ ಕಂಪೆನಿಯು ಮಣ್ಣಿನಡಿಯಲ್ಲಿ ಪೈಪ್ ಅಳವಡಿಕೆ ಕಾಮಗಾರಿಗಾಗಿ ರಸ್ತೆಯ ಬದಿ ಅಗೆಯುತ್ತಿರುವ ವೇಳೆ ನೀರಿನ ಪೈಪ್ ಗೂ ಹಾನಿಯಾಗಿರುವ ಶಂಕೆ ಇದ್ದು ಇದನ್ನು ಶೀಘ್ರ ದುರಸ್ತಿಪಡಿಸಿ, ಪೋಲಾಗುವುದನ್ನು ತಡೆಯಬೇಕು ಎಂದು ಸಂಬಂಧಪಟ್ಟವರ ಬಳಿ ಸಾರ್ವಜನಿಕರು ಮನವಿ ಮಾಡಿದ್ದಾರೆ.
ತಿಂಗಳ ಹಿಂದೆ ಕೈಕಂಬದಲ್ಲೂ ಇದೇ ಮಾದರಿಯಲ್ಲಿ ಪೈಪ್ ಒಡೆದು ಕೆಸರು ನೀರು ಸಾರ್ವಜನಿಕರಿಗೆ ತೊಂದರೆಯಾಗಿತ್ತು.

SHARE
Loading spinner

Leave a Reply

Your email address will not be published. Required fields are marked *

error: Content is protected !!