ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಂಗ ಸ್ವರೂಪ ಕುಂಜತ್ತಬೈಲ್,ಮಂಗಳೂರು ಇದರ ಆಶ್ರಯದಲ್ಲಿ ಎ. 15 ರಿಂದ 18 ರ ವರೆಗೆ ‘ರಂಗೋತ್ಸವ-2026’ ಮಕ್ಕಳ ಬೇಸಿಗೆ ಶಿಬಿರವು ಮರಕಡ ದ.ಕ. ಜಿ.ಪಂ. ಮಾ. ಹಿ. ಪ್ರಾ. ಶಾಲೆಯಲ್ಲಿ ನಡೆಯಲಿದೆ.ಪ್ರಶಸ್ತಿ ವಿಜೇತ ಕ್ರಿಯಾಶೀಲ ಶಿಕ್ಷಕ ಚೇತನ್ ಕೊಪ್ಪ ಶಿಬಿರ ಉದ್ಘಾಟಿಸಲಿರುವರು.
ಈ ವಿಶಿಷ್ಟ ಶಿಬಿರದಲ್ಲಿ ಮಕ್ಕಳಿಗಾಗಿ ಗೋಡೆ ಪತ್ರಿಕೆ, ಕ್ರಿಯಾತ್ಮಕ ಚಿತ್ರಕಲೆ, ಹಾಡು, ರೇಖಾ ಚಿತ್ರ, ಮುಖವಾಡ ತಯಾರಿ, ನಾಟಕ, ಗೂಡುದೀಪ, ಗಾಳಿಪಟ, ಕ್ರಿಯಾತ್ಮಕ ಬರೆವಣಿಗೆ, ಕೊಲಾಜ್, ಮಿಮಿಕ್ರಿ, ಮೂಕಾಭಿನಯ, ಗಾಳಿಪಟ, ವ್ಯಕ್ತಿತ್ವ ವಿಕಸನ, ಜನಪದ ನೃತ್ಯ, ಆರೋಗ್ಯದ ಮಾಹಿತಿ,ರಸ್ತೆ ಸುರಕ್ಷತೆ,ಯೋಗಾಸನ ಮುಂತಾದ ವಿಷಯದಲ್ಲಿ ಕಾರ್ಯಾಗಾರ ನಡೆಯಲಿದೆ.
ಸುಬ್ರಹ್ಮಣ್ಯ ಕಾಸರಗೋಡು, ಝಬೇರ್ ಖಾನ್ ಕುಡ್ಲ ಅವರ ನಿರ್ದೇಶನದಲ್ಲಿ ಖ್ಯಾತ ಕಲಾವಿದ ಗೋಪಾಡ್ಕರ್, ದಿನೇಶ್ ಹೊಳ್ಳ ಪ್ರೇಮ್ ನಾಥ್ ಮರ್ಣೆ, ತಾರಾನಾಥ್ ಕೈರಂಗಳ, ಅರವಿಂದ ಕುಡ್ಲ,ನವೀನ್ ಸ್ವರೂಪ, ಅಕ್ಷತಾ ಕುಡ್ಲ ,
ಹುಸೈನ್ ರಿಯಾಝ್ ತಸ್ಲಿಮಾ, ಅನೀಸಾ, ಸುಮನಾ ರೆಬೆಲ್ಲೊ,ಜ್ಯೋತಿ ಸುಬ್ರಮಣ್ಯ, ಶಿಲ್ಪಾ,ಸುನೀತಾ ಲೂಯಿಸ್,ಮಮತಾ ಕೆದಿಲಾಯ, ಅದಿ ಸ್ವರೂಪ,ವೈಷ್ಣವಿ ರಾಜೇಶ್ ರೈಹಾನ್,ಜೆನಿಫರ್, ಸ್ನೇಹ, ರಿಫಾ ಮುಂತಾದವರು ಮಾರ್ಗದರ್ಶನ ನೀಡಲಿದ್ದಾರೆ.
ಎ.18ರಂದು ಸಂಜೆ 6ಕ್ಕೆ ಸಮಾರೋಪ ನಡೆಯಲಿದ್ದು, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ,ಮರಕಡ ಶಾಲೆಯ ನಿವೃತ್ತ ಶಿಕ್ಷಕಿ ಭವಾನಿ ಯವರಿಗೆ ರಂಗ ಸ್ವರೂಪ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಆಸಕ್ತರು ಶಿಬಿರದ ಸಂಯೋಜಕ ರೆಹಮಾನ್ ಖಾನ್ ಕುಂಜತ್ತಬೈಲ್ (9880835659) ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.